ಮೊರಾದಾಬಾದ್(ಫೆ. 25) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದ  ಕೇಶವ್ ದೇವ್ ಮೌರ್ಯ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಮತ ಹಾಕಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು ,ಆತ ಪಾಕಿಸ್ತಾನದವನಾದರೂ ಮತದಾನ ಮಾಡಬೇಕು ಎಂದಿದ್ದಾರೆ.

ಲೋಕಸಭಾ ಎಲೆಕ್ಷನ್: ಬೆಂಗಳೂರು ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿ ಬಹುತೇಕ ಫೈನಲ್..!

ಅಭ್ಯರ್ಥಿ ಒಳ್ಳೆಯವನೋ, ಕೆಟ್ಟವನೋ ನೋಡಬೇಡಿ, ಕಾಂಗ್ರೆಸ್‌ ಗೆ ಮತದಾನ ಮಾಡಿ ಎಂದು ಮೆರವಣಿಗೆ ವೇಳೆ ಹೇಳಿದ್ದಾರೆ. ಫೆಬ್ರವರಿ 13 ರಂದು ಕಾಂಗ್ರೆಸ್‌ಗೆ ಸೇರಿದ್ದ ಮೌರ್ಯ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಏರಲು ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಗೆದ್ದ ಸ್ಥಾನಗಳು ನೆರವಾಗಿದ್ದವು.