ಮನಮೋಹನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಈ ಖ್ಯಾತ ನಟ; ವೈರಲ್ ಆಯ್ತು ವಿಡಿಯೋ

Viral video of Anupam Kher as Manmohan Singh is a must watch
Highlights

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಸಂಜಯ್‌ ಬಾರು ಅವರು, ಡಾ.ಸಿಂಗ್‌ ಅವರು ಪ್ರಧಾನಿಯಾದ ಬಗೆ ಕುರಿತು ಬರೆದ ‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರವಾಗುತ್ತಿರುವುದು ಗೊತ್ತೇ ಇದೆ. ಆದರೆ, ಇದೀಗ ಹೊಸ ಸುದ್ದಿಯೇನಂದ್ರೆ, ಈ ಚಿತ್ರದಲ್ಲಿ ಡಾ.ಸಿಂಗ್‌ ಪಾತ್ರ ನಿರ್ವಹಿಸುತ್ತಿರುವ ಅನುಪಮ್‌ ಖೇರ್‌ ಅವರ ಮೊದಲ ವಿಡಿಯೋ ಈಗ ಬಿಡುಗಡೆಯಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.

ಮುಂಬೈ (ಏ. 13):  ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಸಂಜಯ್‌ ಬಾರು ಅವರು, ಡಾ.ಸಿಂಗ್‌ ಅವರು ಪ್ರಧಾನಿಯಾದ ಬಗೆ ಕುರಿತು ಬರೆದ ‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರವಾಗುತ್ತಿರುವುದು ಗೊತ್ತೇ ಇದೆ. ಆದರೆ, ಇದೀಗ ಹೊಸ ಸುದ್ದಿಯೇನಂದ್ರೆ, ಈ ಚಿತ್ರದಲ್ಲಿ ಡಾ.ಸಿಂಗ್‌ ಪಾತ್ರ ನಿರ್ವಹಿಸುತ್ತಿರುವ ಅನುಪಮ್‌ ಖೇರ್‌ ಅವರ ಮೊದಲ ವಿಡಿಯೋ ಈಗ ಬಿಡುಗಡೆಯಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಡಾ.ಮನಮೋಹನ್‌ ಸಿಂಗ್‌ ಅವರಂತೆ ನೀಲಿ ಬಣ್ಣದ ರುಮಾಲು(ಟರ್ಬನ್‌), ಕುರ್ತಾ ಪೈಜಾಮಾವನ್ನು ತೊಟ್ಟಿರುವ ಅನುಪಮ್‌ ಖೇರ್‌, ಥೇಟ್‌ ಸಿಂಗ್‌ ಅವರ ರೀತಿಯಲ್ಲೇ ನಡೆದಿದ್ದಾರೆ. ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಖೇರ್‌, ‘ಡಾ.ಸಿಂಗ್‌ ಅವರ ರೀತಿಯ ವೇಷಭೂಷಣದಲ್ಲಿರುವ ವಿಡಿಯೋವನ್ನು ಹಲವಾರು ಮಂದಿ ನನಗೇ ಕಳುಹಿಸಿದ್ದಾರೆ. ಬ್ರಿಟನ್‌ನಲ್ಲಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಚಿತ್ರದ ಚಿತ್ರೀಕರಣದ ವೇಳೆ ಮಾಡಿದ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ,’ ಎಂದು ಉಲ್ಲೇಖಿಸಿದ್ದಾರೆ.

ಈ ಚಿತ್ರವನ್ನು ವಿಜಯ್‌ ರತ್ನಾಕರ್‌ ಗುಟ್ಟೆಅವರು ನಿರ್ದೇಶಿಸುತ್ತಿದ್ದು, ಇನ್ನು 2004-08ರವರೆಗೂ ಡಾ.ಸಿಂಗ್‌ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಸಂಜಯ್‌ ಬಾರು ಅವರ ಪಾತ್ರವನ್ನು ಬಾಲಿವುಡ್‌ನ ಆ್ಯಕ್ಷನ್‌ ಹೀರೋ ಅಕ್ಷಯ್‌ ಕುಮಾರ್‌ ಅವರು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು ಇದೇ ವರ್ಷದ ಡಿಸೆಂಬರ್‌ 21ರಂದು ಬೆಳ್ಳಿ ತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. 

 

 

 

 

 

 

 

loader