Asianet Suvarna News Asianet Suvarna News

ವೈರಲ್ ಚೆಕ್: ತ.ನಾಡು ರಾಜಕಾರಣಿ ಮನೇಲಿ ರಾಶಿ ರಾಶಿ ಹಣ?

ಗೋದಾಮೊಂದರಲ್ಲಿ ರಾಶಿ ರಾಶಿ ಹಣವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ತಮಿಳುನಾಡಿನ ನಾಯಕನಿಗೆ ಸೇರಿದ್ದು ಎಂಬ ಸದ್ದೂ ಕೇಳಿ ಬಂದಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ವಿವರ

Viral check Video Of An Art Installation Falsely Shared As TN Politician s Embezzled Cash
Author
Chennai, First Published Mar 13, 2019, 11:10 AM IST

ಚೆನ್ನೈ[ಮಾ.13]: ಗೋದಾಮೊಂದರಲ್ಲಿ ರಾಶಿ ರಾಶಿ ಹಣವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಹಣ ತಮಿಳುನಾಡಿನ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದ್ದು ಎಂದು ಆರೋಪಿಸಲಾಗಿದೆ.

ವಿಡಿಯೋವನ್ನು ಪೋಸ್ಟ್‌ ಮಾಡಿ, ‘ ಕ್ಯಾಶ್‌ ಕ್ಯಾಶ್‌ ಎಲ್ಲಿ ನೋಡಿದರೂ ಕ್ಯಾಶ್‌. ಇದು ತಮಿಳುನಾಡಿನ ರಾಜಕಾರಣಿಗೆ ಸಂಬಂಧಿಸಿದ್ದು. ನೋಟುಗಳು ಸುಟ್ಟು ಕರಕಲಾಗಿವೆ ನಿಜ. ಆದರೆ ಲೆಕ್ಕಕ್ಕೇ ಸಿಗದ ಹಣ ಎಷ್ಟಿದೆ ನೋಡಿ’ ಎಂದು ಒಕ್ಕಣೆ ಬರೆದು ಶೇರ್‌ ಮಾಡಿದ್ದಾರೆ. ವಿಡಿಯೋದಲ್ಲಿ ಗುಲಾಬಿ, ಹಸಿರು, ಹಳದಿ ಬಣ್ಣದ ನೋಟುಗಳಿವೆ.

Viral check Video Of An Art Installation Falsely Shared As TN Politician s Embezzled Cash

ಈ ಹಿಂದೆ ಫ್ರಾನ್ಸ್‌ ನಲ್ಲಿಯೂ ಇದೇ ವಿಡಿಯೋ ವೈರಲ್‌ ಆಗಿತ್ತು. ಅಲ್ಲಿನ ಸಚಿವರೊಬ್ಬರು ಅಕ್ರಮವಾಗಿ ಹಣ ಕೂಡಿಟ್ಟಿದ್ದು, ತನಿಖೆ ಭೀತಿಯಲ್ಲಿ ಸಚಿವರ ಹೆಂಡತಿ ಹಣವನ್ನು ಸುಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಈ ವಿಡಿಯೋದ ಅಸಲಿಯತ್ತೇನು ಎಂದು ಪರಿಶೀಲಿಸಿದಾಗ ಇದೊಂದು ಕಲೆ ಎಂದು ತಿಳಿದುಬಂದಿದೆ.

 
 
 
 
 
 
 
 
 
 
 
 
 

#artmadrid #artfair

A post shared by Alejandro Monge (@monge_art) on Feb 25, 2018 at 5:26am PST

ಅಲೆಜಾಂಡ್ರೋ ಮಾಂಗೇ ಎಂಬುವವರ ಕುಂಚದಲ್ಲಿ ಮೂಡಿಬಂದ ಕಲೆ ಇದು. 2018ರಲ್ಲಿ ಸ್ವತಃ ಮಾಂಗೇ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

Follow Us:
Download App:
  • android
  • ios