ಚಾಮರಾಜನಗರ (ಫೆ. 26): ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚಿಗೆ ಸಿಲುಕಿ ಅಲ್ಲಿನ ಅನೇಕ ಜೀವರಾಶಿಗಳು ಮೃತಪಟ್ಟಿವೆ ಎಂಬ ಸುದ್ದಿ ವಾಟ್ಸಾ ಪ್‌ನಲ್ಲಿ ಹರಿದಾಡುತ್ತಿದೆ. ಬಂಡೀಪುರ ದ ಚಿತ್ರಗಳು ಎಂದು ಸುಟ್ಟು ಕರಕಲಾದ ಹಾವು, ಮೊಲ,
ಒರಂಗುಟವ್ ಮತ್ತು ಕಾಡು ಕುರಿಗಳ ಚಿತ್ರವಿರುವ 4  ಫೋಟೋಗಳು ಬಾರೀ ವೈರಲ್ ಆಗುತ್ತಿವೆ.

ಆದರೆ ಅವು ಬಂಡೀ ಪುರದ ಕಾಡ್ಗಿಚ್ಚಿನಲ್ಲಿ  ಮೃತಪಟ್ಟ ಪ್ರಾಣಿಗಳ ಫೋಟೋಗಳಲ್ಲ. ಬದಲಾಗಿ ಜಗತ್ತಿನ ವಿವಿಧೆಡೆಯ ಕಾಳ್ಗಿಚ್ಚಿನ ಫೋಟೋ ಗಳೆಂದು ‘ದಿ ನ್ಯೂ ಸ್ ಮಿನಿಟ್’ ಸುದ್ದಿ ಸಂಸ್ಥೆ ಪತ್ತೆ ಹಚ್ಚಿದೆ. 

ಈ ಪ್ರಾಣಿಗಳು ಬಂಡೀಪುರ ಕಾಡ್ಗಿಚ್ಚಿನಲ್ಲಿ ಮೃತಪಟ್ಟ ಪ್ರಾಣಿಗಳಲ್ಲ ಎಂದು ತಿಳಿದು ಬಂದಿದೆ. ಕರ್ನಾಟಕ ಅರಣ್ಯ ಇಲಾಖೆಯು ಇದಕ್ಕೆ ಸ್ಪಷ್ಟೀಕರಣ ನೀಡಿದೆ. 

 

- ವೈರಲ್ ಚೆಕ್