ಭಾರತದ ರೈತ ಪ್ರತಿಭಟನೆಗೆ ಲಂಡನ್‌‌ನಿಂದ ಬೆಂಬಲ; ಕಾರಣ ಏನು?...

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 17ನೇ ದಿನಕ್ಕೆ ಕಾಲಿಟ್ಟಿದೆ. ರೈತರು ತಮ್ಮ ಪಟ್ಟು ಸಡಿಲಿಸಿಲ್ಲ. ಹೋರಾಟ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಈಗಾಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೋರಾಟ ಸದ್ದು ಮಾಡುತ್ತಿದೆ. ವಿಶೇಷವಾಗಿ ಭಾರತದ ರೈತ ಪ್ರತಿಭಟನೆಗೆ  ಲಂಡನ್‌‌ನಿಂದ ಬೆಂಬಲ ವ್ಯಕ್ತವಾಗಿದೆ. ಇದೀಗ ಲಂಡನ್ ಬೀದಿಗಳಲ್ಲೂ ಭಾರತದ ರೈತರ ಪರವಾಗಿ ಪ್ರತಿಭಟನ ಆರಂಭಗೊಂಡಿದೆ. ಇದಕ್ಕೆ ಕಾರಣವೇನು? 

ಹೊಸ ವರಸೆ ತೆಗೆದ ಮದ್ಯ ದೊರೆ ವಿಜಯ್ ಮಲ್ಯ, ಏನಂತೀಗ?...

ಮದ್ಯದ ದೊರೆ ವಿಜಯ್ ಮಲ್ಯ ಮೇಲಿನ 9,000 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಉರುಳು ಬಿಗಿಯಾಗುತ್ತಿದೆ. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಮಲ್ಯ, ಕಾನೂನು ಹೋರಾಟ ಮುಂದುವರಿಸಿದ್ದಾರೆ. ಬ್ಯಾಂಕ್ ಸಾಲ ಮರುಪಾವತಿಗೆ ಹಲವು ಕತೆ ಹೇಳಿದ ಮಲ್ಯ, ಇದೀಗ ಕಾನೂನು ಹೋರಾಟದ ನಡುವೆ ಹೊಸ ಕ್ಯಾತೆ ತಗೆದಿದ್ದಾರೆ.

ಹೇಡಿತನದ ಕೃತ್ಯ ಯಾವತ್ತೂ ಮರೆಯಲ್ಲ: 2001ರ ಸಂಸತ್ ದಾಳಿ ನೆನಪಿಸಿಕೊಂಡ ಮೋದಿ!...

ಡಿಸೆಂಬರ್ 13, 2001ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸಂಸತ್ತಿನ ಮೇಲೆ ಉಗ್ರರು ನಡೆಸಿದ ದಾಳಿಯನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಡಿತನದ ಕೃತ್ಯ ನಾವು ಯಾವತ್ತೂ ಮರೆಯಲ್ಲ ಎಂದು ಹೇಳಿದ್ದಾರೆ.

'ಬಿರಿಯಾನಿ, ಫೂಟ್ ಮಸಾಜರ್, ಪಿಝಾ..! ಇದೇನು ಪ್ರತಿಭಟನೆಯಾ, ಪಿಕ್‌ನಿಕ್ಕಾ'..?...

ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಆದ್ರೆ ಅಲ್ಲಿನ ಲ್ಯಾವಿಶ್ ಲೈಫ್ ಹೇಗಿದೆ ಗೊತ್ತಾ..? ಪ್ರತಿಭಟನೆ ಇದೀಗ ಆಡಂಬರ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

ಕೇರಳದಲ್ಲಿ ಕೊರೋನಾ ಔಷಧ ಉಚಿತ: ಸಿಎಂ ಭರವಸೆ...

ಕೊರೋನಾ ಬಂದು 9 ತಿಂಗಳು ಕಳೆಯುತ್ತಾ ಬಂದಿದ್ದರೂ ಇನ್ನೂ ಹೆಚ್ಚಿಗೆ ರೇಷನ್ ನೀಡುತ್ತಿರುವ ನೆರೆ ರಾಜ್ಯ ಕೇರಳ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದೆ. ಜನರಿಗೆ ಕೊರೋನಾ ಲಸಿಕೆ ಉಚಿತವಾಗಿ ನೀಡಲು ಮುಂದಾಗಿದೆ ಪಿಣರಾಯ್ ವಿಜಯನ್ ಸರ್ಕಾರ

ಪಿಂಕ್ ಬಾಲ್ ಟೆಸ್ಟ್‌ಗೆ ಆಸೀಸ್‌ ತಂಡ ಕೂಡಿಕೊಂಡ ಮಾರಕ ವೇಗಿ..!...

ಭಾರತ ವಿರುದ್ದದ ಮೊದಲ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಕೂಡಿಕೊಳ್ಳಲಿದ್ದಾರೆ ಮಾರಕ ವೇಗಿ. ಗಾಯದ ಸಮಸ್ಯೆಯಿಂದ ತತ್ತರಿಸಿಹೋಗಿದ್ದ ಕಾಂಗರೂ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದ ಎಡಗೈ ವೇಗಿ. 

ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದ ಆರ್ಯವರ್ಧನ್?...

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್‌ ಸೀಸನ್‌ 8 ರಿಯಾಲಿಟಿ ಶೋ ಆರಂಭವಾಗಲಿದೆ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು,ಜೊತೆ ಜೊತೆಯಲಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅರ್ಯವರ್ಧನ್ ಅಲಿಯಾಸ್ ಅನಿರುದ್ಧ ಕೂಡ ಶೋನಲ್ಲಿ ಭಾಗಿಯಾಗುತ್ತಾರೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಭಾರತಕ್ಕೆ ಸ್ಯಾಮ್‌ಸಂಗ್‌ ಘಟಕ: ಚೀನಾಕ್ಕೆ ಆಘಾತ!...

ಇಡೀ ವಿಶ್ವಕ್ಕೇ ಕೊರೋನಾ ಹಬ್ಬಿಸಿ ಟೀಕೆಗೆ ಗುರಿಯಾಗಿರುವ ಹಾಗೂ ಭಾರತದೊಂದಿಗೆ ಗಡಿ ತಂಟೆ ಮಾಡುತ್ತಿರುವ ಚೀನಾಗೆ ಮತ್ತೊಂದು ಆಘಾತ ಉಂಟಾಗಿದೆ. ವಿಶ್ವದ ಪ್ರಸಿದ್ಧ ಮೊಬೈಲ್‌ ತಯಾರಕ ಕಂಪನಿಯಾದ ಸ್ಯಾಮ್ಸಂಗ್‌ ಚೀನಾ ತೊರೆದು ಭಾರತಕ್ಕೆ ಬರಲು ನಿರ್ಧರಿಸಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಹಾಗೂ ಆತ್ಮನಿರ್ಭರ ಭಾರತ ಚಿಂತನೆಗೆ ಭರ್ಜರಿ ಯಶಸ್ಸು ಸಿಕ್ಕಂತಾಗಿದೆ.

ಎಚ್‌ಡಿಕೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕನ ಮನೆಗೆ ಡಿಕೆಶಿ: ಸಂಧಾನ ಯತ್ನ...

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಮೊನ್ನೇ ಅಷ್ಟೇ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಿರಿಯ ನಾಯಕನ ಮನೆಗೆ ಭೇಟಿ ನೀಡಿ ಜೆಡಿಎಸ್‌ಗೆ ಆಹ್ವಾನಿದ್ದರು. ಇದರ ಬೆನ್ನಲೇ ಡಿಕೆಶಿ ಶಿವಕುಮಾರ್ ತಮ್ಮ ನಾಯಕ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.

ಬ್ರೇಕಪ್‌ ಬಳಿಕ ಸ್ತ್ರೀಯರು ರೇಪ್‌ ದೂರು ನೀಡ್ತಾರೆ: ಮಹಿಳಾ ಆಯೋಗ ಅಧ್ಯಕ್ಷೆ!...

ಸಂಬಂಧ ಹಳಸಿದ ಬಳಿಕ ಮಹಿಳೆಯರು ಅತ್ಯಾಚಾರ ಆರೋಪ ಮಾಡಿ ದೂರು ನೀಡುತ್ತಾರೆ ಎಂದು ಛತ್ತೀಸ್‌ಗಢ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದಾರೆ. ಅವರ ಹೇಳಿಕೆ ಇದೀಗ ಆಕ್ರೋಶಕ್ಕೆ ಎಡೆ ಮಾಡಿ ಕೊಟ್ಟಿದೆ.