ಬೆಂಗಳೂರು, [ಜ.05]: ವಿಧಾನಸೌಧದಲ್ಲಿ 25 ಲಕ್ಷ ಹಣ ಸಿಕ್ಕ ಪ್ರಕರಣ ಸಂಬಂಧ ಸಚಿವ   ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಕೊಡಿಸಿ ನಿಮ್ಮ ಪೌರುಷ ತೋರಿಸಿ ಎಂದು ಸಿದ್ದರಾಮಯ್ಯಗೆ ಕರ್ನಾಟಕ ಬಿಜೆಪಿ ಸವಾಲು ಹಾಕಿದೆ.

ಸಿದ್ದರಾಮಯ್ಯ ಅವರೇ,  ಟ್ವಿಟರ್ ನಲ್ಲಿ ಒಣ ಪೌರುಷ ತೋರಿಸುವುದನ್ನು ನಿಲ್ಲಿಸಿ.  ನಿಮ್ಮ ಆತ್ಮೀಯ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ 25.76 ಲಕ್ಷ ಹಣ ಸಿಕ್ಕಿದೆ.

ಮಾಜಿ ಸಿಎಂ ಆಪ್ತ ಸಚಿವರ ಸಿಬ್ಬಂದಿ ಬಳಿ ವಿಧಾನಸೌಧದಲ್ಲೆ ಲಕ್ಷಗಟ್ಟಲೆ ಹಣ ಪತ್ತೆ

ವಿಧಾನಸೌಧದಲ್ಲಿಯೇ ದಂಧೆ  ಶುರು ಮಾಡಿದ್ದೀರಿ. ಇದೇನಾ ನಿಮ್ಮ ಭ್ರಷ್ಟ ಮುಕ್ತ ಸರಕಾರ? ಎಂದು ಪ್ರಶ್ನಿಸಿದೆ. ಮೊದಲು ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಕೊಡಿಸಿ ನಿಮ್ಮ ಪೌರುಷ ತೋರಿಸಿ  ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ತಾಕೀತು ಮಾಡಿದೆ.

ನಿನ್ನೆ [ಶುಕ್ರವಾರ] ಹಿಂದೂಳಿದ ವರ್ಗಗಳ ಸಚಿವ ಪುಟ್ಟರಂಗ ಶೆಟ್ಟಿ ಅವರ ವಿಧಾನ ಸೌಧ ಕಚೇರಿ ಸಿಬ್ಬಂದಿ ಮೋಹನ್ ಎನ್ನುವರ ಬಳಿ ದಾಖಲೆ ಇಲ್ಲದೆ ಬರೋಬ್ಬರಿ 25 ಲಕ್ಷ ಹಣ ಸಿಕ್ಕಿದೆ.

ಸಧ್ಯ ಮೋಹನ್ ಅವರನ್ನು ವಿಧಾನಸಭಾ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.