Asianet Suvarna News Asianet Suvarna News

ಏಕವಚನ, ವೈಯುಕ್ತಿಕ ಮಟ್ಟಕ್ಕಿಳಿದ ಕೈ-ಜೆಡಿಎಸ್ ನಾಯಕರ ವಾಕ್ಸಮರ!

Oct 9, 2018, 5:57 PM IST

ಮಂಡ್ಯ ಕಾಂಗ್ರೆಸ್- ಜೆಡಿಎಸ್ ನಾಯಕರ ಮಾತಿನ ಜಟಾಪಟಿ ಮುಂದುವರಿದಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಆರಂಭವಾದ ವಾಕ್ಸಮರ ಇದೀಗ ವೈಯುಕ್ತಿಕ ಮಟ್ಟಕ್ಕಿಳಿದಿದೆ. ಜೆಡಿಎಸ್ ಪಕ್ಷದ ವಿರುದ್ಧ ಸೋಮವಾರ ಹರಿಹಾಯ್ದಿದ್ದ ಕೈ ನಾಯಕ ಚೆಲುವರಾಯ ಸ್ವಾಮಿಗೆ ಜೆಡಿಎಸ್ ಸಚಿವ ಸಿ.ಎಸ್. ಪುಟ್ಟರಾಜು, ’ಡೆಡ್ ಹಾರ್ಸ್‌’ಗೆ ಹೋಲಿಸಿ ತಿರುಗೇಟು ನೀಡಿದ್ದರು. ಇದೀಗ ’ಡೆಡ್ ಹಾರ್ಸ್’ ಹೇಳಿಕೆಗೆ ಚೆಲುವರಾಯ ಸ್ವಾಮಿ ಕೆರಳಿದ್ದಾರೆ. ಪುಟ್ಟರಾಜುಗೆ ಏಕವಚನದಲ್ಲೇ ಸಂಬೋಧಿಸಿ ಮಾತನಾಡಿರುವ ಕೈನಾಯಕ ಏನು ಹೇಳಿದ್ದಾರೆ ನೋಡೋಣ ಈ ವಿಡಿಯೋನಲ್ಲಿ...