Asianet Suvarna News Asianet Suvarna News

2019 ರ ಮಹಾಸಮರಕ್ಕೆ ಮುನ್ನಡಿ: ಬೈ ಎಲೆಕ್ಷನ್ ಗೆಲುವು ಯಾರಿಗೆ?

Oct 6, 2018, 9:50 PM IST

ಬೆಂಗಳೂರು(ಅ.6): ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ 3 ಲೋಕಸಭೆ ಕ್ಷೇತ್ರ, 2 ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಕರ್ನಾಟಕದ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳ ಉಪಚುನಾವಣೆ, ರಾಮನಗರ ಮತ್ತು ಜಮಖಂಡಿ ವಿಧಾನಭೆ ಕ್ಷೇತ್ರಗಳ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ. ಫಲಿತಾಂಶವನ್ನು ನವೆಂಬರ್ 6 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಅದರಂತೆ ಛತ್ತೀಸ್ ಗಡ್ ನಲ್ಲಿ 5 ನವೆಂಬರ್ ಮೊದಲ ಹಂತ, 20 ನವೆಂಬರ್ ಎರಡನೇ ಹಂತ, ಮಧ್ಯಪ್ರದೇಶದಲ್ಲಿ 28 ನವೆಂಬರ್, ಮೀಜೋರಾಂನಲ್ಲಿ 28ನವೆಂಬರ್, ರಾಜಸ್ಥಾನದಲ್ಲಿ 7 ಡಿಸೆಂಬರ್, ತೆಲಂಗಾಣದಲ್ಲಿ 7 ಡಿಸೆಂಬರ್ ನಂದು ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಡಿಸೆಂಬರ್ 11 ಕ್ಕೆ ಪ್ರಕಟಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಈ ಕುರಿತಂತೆ ನಿಮ್ಮ ಸುವರ್ಣ ನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ಕಾರ್ಯಕ್ರಮದಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ.