ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ವೈರಲ್ ಆಯ್ತು ವಿಡಿಯೋ

Video of girl being sexually harassed goes viral in Bihar
Highlights

ಬಾಲಕಿಯೋರ್ವಳ ಮೇಲೆ ಗುಂಪೊಂದು ಅತ್ಯಾಚಾರ ಎಸಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕಳೆದ ಮೂರು ತಿಂಗಳ ಹಿಂದೆಯೇ ಈ ಘಟನೆ ಬಿಹಾರದ ಕೈಮುರಿ ಪ್ರದೇಶದಲ್ಲಿ ನಡೆದಿದ್ದು, ಇದೀಗ ಎಫ್ಐಆರ್ ದಾಖಲಿಸಿ ಓರ್ವನ ಬಂಧಿಸಲಾಗಿದೆ. 

ಪಾಟ್ನಾ : ಬಾಲಕಿಯೋರ್ವಳ ಮೇಲೆ  ಲೈಂಗಿಕ ದೌರ್ಜನ್ಯ ವಿಡಿಯೋ ಒಂದು ಬಿಹಾರದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.  ಬಿಹಾರದ ಕೈಮುರಿ ಪ್ರದೇಶದಲ್ಲಿ  ಮೇ 27 ರಂದೇ ಈ ಘಟನೆ ನಡೆದಿದ್ದು, ಈ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಈ ಸಂಬಂಧ ಪ್ರತಿಕ್ರಿಯಿಸಿದ ಪೊಲೀಸ್ ವಕ್ತಾರರಾದ ಮೊಹಮ್ಮದ್ ಫರೋಗುದ್ದಿನ್ , ಈ ಘಟನೆಯು ಭಗ್ವಾನ್ ಪುರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮಸಾಹಿ ಎಂಬ ಹಳ್ಳಿಯ್ಲಲಿ  ನಡೆದಿದೆ. 

ಕೆಲವು ವ್ಯಕ್ತಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿದ್ದಾರೆ. ಈ ಸಂಬಂಧ ಇದೀಗ ಎಫ್ ಐಆರ್ ದಾಖಲು ಮಾಡಲಾಗಿದ್ದು, ಓರ್ವನ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಅಲ್ಲದೇ  ಕಳೆದ 2 ತಿಂಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ. ಜೂನ್ 9 ರಂದು ಕೂಡ ತನ್ನ ಫ್ರೆಂಡ್ ಜೊತೆಗೆ ಇದ್ದ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮಾಡಿದ  ವಿಡಿಯೋ ಕೂಡ  ಜೂನ್ 12 ರಂದು ವೈರಲ್ ಆಗಿದೆ ಎಂದು ಹೇಳಿದ್ದಾರೆ.  

loader