Asianet Suvarna News Asianet Suvarna News

ಮೈಸೂರು ದಸರಾಗೆ ಸೆಡ್ಡು: ಮಹಿಷ ದಸರಾಗೆ ಚಾಲನೆ!

Oct 7, 2018, 1:39 PM IST

ಮೈಸೂರು(ಅ.7):  ಚಾಮುಂಡಿ ದಸರಾಗೆ ಸೆಡ್ಡು ಹೊಡೆದ ಪ್ರಗತಿಪರ ಚಿಂತಕರು, ಮೈಸೂರಿನಲ್ಲಿ ಚಾಮುಂಡಿ ದಸರಾಗೆ ಪ್ರತಿಯಾಗಿ ಮಹಿಷ ದಸರಾಗೆ ಚಾಲನೆ ನೀಡಿದ್ದಾರೆ. ಮೈಸೂರಿನ ಟೌನ್‌ಹಾಲ್ ಮುಂಭಾಗ ಮಹಿಷ ದಸರಾಗೆ ಚಾಲನೆ ನೀಡಲಾಗಿದ್ದು, ಮಹಿಷ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಸಕ ಸತೀಶ್ ಜಾರಕಿಹೋಳಿ ಚಾಲನೆ ನೀಡಿದರು. ಮಹಿಷ ದಸರಾ ಸಮಾರಂಬದಲ್ಲಿ ಫ್ರೊ.ಭಗವಾನ್, ಪ್ರೊ. ಮಹೇಶ್‌ಚಂದ್ರಗುರು ಸೇರಿದಂತೆ ಹಲವು ಚಿಂತಕರು ಭಾಗಿಯಾಗಿದ್ದರು.