Asianet Suvarna News Asianet Suvarna News

ಅಕ್ಬರ್ ಕುರಿತು ಪ್ರಶ್ನೆ ಕೇಳಿದ್ರೆ ಓಡಿ ಹೋದ ಬಿಜೆಪಿ ವಕ್ತಾರ!

Oct 17, 2018, 3:08 PM IST

ನವದೆಹಲಿ(ಅ.17): ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಕುರಿತು ಕೇಳಲಾದ ಪ್ರಶ್ನೆಗೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಜಾರಿಕೊಂಡ ಪ್ರಸಂಗ ನಡೆದಿದೆ.

ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸಂಬೀತ್ ಪಾತ್ರಾ, ಪತ್ರಕರ್ತರ ಜೊತೆ ಮಾತನಾಡುತ್ತಿದ್ದಾಗ ಅಕ್ಬರ್ ರಾಜೀನಾಮೆ ಕುರಿತು ಪ್ರಶ್ನೆ ಕೇಳಲಾಯಿತು. ಇದರಿಂದ ತುಸು ಮುಜುಗರಕ್ಕೀಡಾದಂತೆ ಕಂಡುಬಂದ ಅವರು, ಕೂಡಲೇ ಸ್ಥಳದಿಂದ ಕಾಲ್ಕಿತ್ತರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...