Asianet Suvarna News Asianet Suvarna News

ಈತ ಅಂತಿಂಥವನಲ್ಲ! ಅಲೋಕ್ ಕುಮಾರ್‌ಗೆ ಸೆಡ್ಡು ಹೊಡೆದ ಪುಡಿರೌಡಿ!

Oct 16, 2018, 3:55 PM IST

ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಪೊಲೀಸರ ರೆಕಾರ್ಡ್‌ನಲ್ಲಿ ತಲೆಮರೆಸಿಕೊಂಡ ಜಾನಿ ಎಂಬ ಪುಡಿರೌಡಿಯೊಬ್ಬ, ಸಚಿವ ಡಿಕೆಶಿಗೂ ಜೈ, ಆರ್‌.ವಿ. ದೇವರಾಜ್‌ಗೂ ಜೈ, ಎನ್.ಎ. ಹ್ಯಾರಿಸ್‌ಗೂ ಜೈ ಎನ್ನುತ್ತಾ ರಾಜಾರೋಷವಾಗಿ ಓಡಾಡುತ್ತಿದ್ದಾನೆ, ಅಟ್ಟಹಾಸ ಮೆರೆಯುತ್ತಿದ್ದಾನೆ. ಆದರೂ ಪೊಲೀಸರು ಈತನನ್ನು ಬಂಧಿಸಿಲ್ಲ. ಬಾಲಬಿಚ್ಚದಂತೆ ರೌಡಿಗಳಿಗೆ  ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದರೂ, ಅದಕ್ಕೂ ಕ್ಯಾರೇ ಎನ್ನದೇ ಈತ ದರ್ಪ ಮೆರೆಯುತ್ತಿದ್ದಾನೆ.