ಬೆಂಗಳೂರು (ಫೆ. 26): ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್ ಗೆ ತಕ್ಕ ಪಾಠ ಕಲಿಸಿದೆ. ಪಾಕ್ ಉಗ್ರರ ಟಡಗುತಾಣಗಳ ಮೇಲೆ ದಾಳಿ ಮಾಡಿ ಉಡೀಸ್ ಮಾಡಿದೆ.

1ಕ್ಕೆ 20, ವಾರ್ ಆದ್ರೆ ಪಾಕ್‌ಗೆ ಕುತ್ತು: ಇಲ್ಲಿದೆ ಭಾರತದ ತಾಕತ್ತು!

ಬೆಳಗಿನ ಜಾವ 3.30 ರ ಸುಮಾರಿಗೆ ಉಗ್ರರ ಅಡಗುತಾಣಗಳ ಮೇಲೆ 21 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ 300 ಉಗ್ರರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ದಾಳಿಯನ್ನು ಪಾಕ್ ಮಾಧ್ಯಮಗಳೇ ಅಧಿಕೃತ ಹೇಳಿಕೆ ನೀಡಿದೆ. 

ಉಗ್ರರ 350ಕೆಜಿ ಬಾಂಬ್ ಗೆ, ಭಾರತದ 1000 ಕೆಜಿ ಬಾಂಬ್‌ ನಿಂದ ಉತ್ತರ!

ಪಾಕ್ ಮೇಲಿನ ದಾಳಿಗೆ ದೇಶಾದ್ಯಂತ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಮಂಗಳೂರು, ಕಾರವಾರ, ಕೊಪ್ಪಳದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.