ಬೆಂಗಳೂರು(ಜ.17)  ಕಳೆದ ಒಂದು ವಾರದಿಂದ ಆಪರೇಶನ್ ಕಮಲ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಭಿನ್ನ-ವಿಭಿನ್ನ ಪ್ರತಿಕ್ರಿಯೆ ಬರುತ್ತಿವೆ.  ನವರಸ ನಾಯಕ ಜಗ್ಗೇಶ್ ಸಹ ಟ್ರೋಲ್‌ಗೆ ಗುರಿಯಾಗಿದ್ದರು.

ಆದರೆ ಇದೆಲ್ಲದಕ್ಕೆ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ರಿಯಾಕ್ಷನ್ ನೀಡಿದ್ದಾರೆ. ನಂದೇನು ಕಿತ್ಕೋಳಕೆ ಆಗೋಲ್ಲ.... ಓಂ ನಮಃ ಶಿವಾಯ.. ! ಎಂದಷ್ಟೆ ಹೇಳಿದ್ದಾರೆ.

ಲುಂಗಿ ಉಟ್ಟು ಮಂಕಿ ಕ್ಯಾಪ್‌ ಹಾಕಿ KGF ಕಂಡ ಜಗ್ಗೇಶ್‌..ಯಾಕೆ!

ಎಲ್ಲರೂ ಅವರವರ ಸಿದ್ಧಾಂತಗಳ ಫಾಲೋ ಮಾಡುತ್ತಿರುತ್ತಾರೆ ಅವರವರ ಭಾವನೆಗಳಿಗೆ ಬೆಲೆ ಕೊಡಬೇಕು ಎನ್ನುತ್ತಲೇ ಸೋಶಿಯಲ್‌ ಮೀಡಿಯಾದಲ್ಲಿ ಅವಚ್ಯವಾಗಿ‌ ನಿಂದಿಸುವವರ ವಿರುದ್ಧ‌ ನವರಸ ನಾಯಕ ಗರಂ ಆಗಿದ್ದಾರೆ.

ಶಿವಕುಮಾರ್ ಸ್ವಾಮೀಜಿ ನಡೆದಾಡುವ ದೇವರು.  ನಾನು ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ .ನಾನು ಕೇಳಿದಕ್ಕೆ ಅವರ ಪಾದುಕೆಯನ್ನೇ ತೆಗೆದು ಕೊಟ್ಟಿದ್ದರು. ಅವರ ಆರೋಗ್ಯದ ಬಗ್ಗೆ ಸದಾ ವಿಚಾರಿಸುತ್ತಿರುತ್ತೇನೆ. ಅವರು ಚೆನ್ನಾಗಿ ಇರಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿದರು.