Asianet Suvarna News Asianet Suvarna News

ಹೇಗಿದೆ ನಿಮ್ಮ ವಾರದ ಭವಿಷ್ಯ

ಹೇಗಿದೆ ನಿಮ್ಮ  ವಾರದ ಭವಿಷ್ಯ

Vara Bhavishya

ಹೇಗಿದೆ ನಿಮ್ಮ  ವಾರದ ಭವಿಷ್ಯ

ಮೇಷ

ಜಾಣತನದ ಮಾತು ಲಾಭ ತಂದುಕೊಡಲಿದೆ. ಸ್ವಲ್ಪ

ಯೋಚಿಸಿ ಮುಂದಡಿಯಿಟ್ಟರೆ ಧನಲಾಭ. ಎಡವಿದರೆ

ಜೇಬು ಖಾಲಿ. ಬದುಕು ಖಾಲಿ ಖಾಲಿ ಅನ್ನಿಸ್ತಿದೆ,

ಮದುವೆ ಆಗಬೇಕು ಅಂತಂದುಕೊಳ್ಳವವರಿಗೆ ಒಳ್ಳೆಯ ಕಾಲ

ಇದು. ಮನಸ್ಸು ಮಾಡಿ ಸಂಬಂಧ ಬೆಸೆಯಲು ಮುಂದಾಗಿ.

ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವುದರಲ್ಲಿ ನಂಬಿಕೆ ಇರಲಿ.

 

ವೃಷಭ

ಒಂದೇ ನೇರಕ್ಕೆ ಕುದುರೆ ಹೋದಂತೆ ತಾನಾಯಿತು ತನ್ನ

ಕೆಲಸ ಆಯಿತು ಎಂದುಕೊಂಡು ಬೇರೆ ಯಾವುದೇ

ಕೆಲಸಕ್ಕೆ ಮುಂದಾಗದವರು ಈ ವಾರವೂ ಸ್ವಲ್ಪ

ತಾಳ್ಮೆಯಿಂದ ಇರುವುದು ಒಳ್ಳೆಯದು. ಈ ವಾರ ಸಾಗುತ್ತಿರುವ

ದಾರಿ ಬಿಟ್ಟು ಬೇರೆ ದಾರಿಗೆ ಹಾರಿದರೆ ಒಳಿತು ಕಮ್ಮಿ. ನಿಮ್ಮ

ಮನಸ್ಸು ನಿಮ್ಮ ಹಿಡಿತದಲ್ಲಿರಲಿ. ನಿಮ್ಮ ಕಣ್ಣು ನಿಮ್ಮ ಮಾತು ಕೇಳಲಿ.

 

ಮಿಥುನ

ಸಂಬಂಧದಲ್ಲಿ ಸಣ್ಣ ಕೋಲಾಹಲ. ಒಂದು ಒಳ್ಳೆಯ

ಮಾತು ಎಂಥಾ ಬಿರುಗಾಳಿಯನ್ನೂ ತಡೆದು

ನಿಲ್ಲಿಸಬಹುದು ಎಂಬುದನ್ನು ನಂಬಿದರೆ ಒಳ್ಳೆಯದು.

ನಕ್ಕ ಹಾಗೆ ನಟಿಸಿದರೂ ಪರವಾಗಿಲ್ಲ, ಎದುರಿಗಿದ್ದ ನಿಮ್ಮವರಿಗೆ

ಸಿಟ್ಟು ಬರಿಸದೇ ಇರುವುದು ಒಳ್ಳೆಯದು. ದುಡ್ಡಿನ ವಿಷಯದಲ್ಲಿ

ಅಗತ್ಯಕ್ಕಿಂತ ಜಾಸ್ತಿಯೇ ಹುಷಾರಾಗಿರಿ.

 

ಕಟಕ

ನೀರಿಲ್ಲದ ಬಾವಿಯಲ್ಲಿ ನೀರು ಸಿಕ್ಕರೆ

ಹೇಗಾಗಬಹುದೋ ಅಂಥದ್ದೊಂದು ಸನ್ನಿವೇಶ

ಎದುರಾಗಬಹುದು. ನಕ್ಕರೆ ಸುಖವುಂಟು. ಅಹಂಕಾರ

ತಲೆಗೇರಿದರೆ ಕಟಕ ಕುಟುಕುವುದು ನಿಶ್ಚಿತ. ತಾರುಣ್ಯದ ಮಂದಿ

ಹೊಸ ಕಣ್ಣ ನೋಟಕ್ಕೆ ಮರುಳಾಗುವ ಸಾಧ್ಯತೆ. ಕಲ್ಲು

ಮುಳ್ಳುಗಳಿರುವ ದಾರಿ ಸಿಗುವ ಲಕ್ಷಣವುಂಟು. ಹುಷಾರು.

 

ಸಿಂಹ

ಏನಿಲ್ಲದಿದ್ದರೂ ಸಿಂಹ ಗಾಂಭೀರ್ಯ ಇದ್ದೇ ಇದೆ.

ಈ ವಾರದ ವಿಶೇಷತೆ ಏನೆಂದರೆ ನೀವು ಕೈಹಾಕಿದ

ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ ಸಿಗಲಿದೆ.

ಬೆವರು ಬರುವುದು ಎಂದು ಹಿಂಜರಿಯುವುದು ಬೇಡ. ಸತತ

ಪ್ರಯತ್ನವಿದ್ದರೆ ಕಲ್ಲು ಬಂಡೆಯನ್ನೇ ಎತ್ತಿ ಆಚೆ ಬಿಸಾಕುವ

ಸಾಮರ್ಥ್ಯ ನಿಮಗುಂಟು. ಅಂಜದಿರಿ. ಹಿಂಜರಿಯದಿರಿ

 

ಕಲ್ಯಾ

ವೃತ್ತಿಯಲ್ಲಿ ಮೆಟ್ಟಿಲು ಹತ್ತುವ ಯೋಗ. ಲಕ್ಷ್ಮೀ

ಮನೆಗೆ ಬರುತ್ತಾಳೆ. ಜೊತೆಯಲ್ಲಿ ಧನವನ್ನೂ

ತೆಗೆದುಕೊಂಡು ಬರುತ್ತಾಳೆ. ಖುಷಿಯ

ವಿಷಯವಾದರೂ ಜಾಸ್ತಿ ಸಂಭ್ರಮ ಬೇಡ. ಆರೋಗ್ಯದ ಮೇಲೆ

ಜಾಸ್ತಿ ನಿಗಾ ಇರಲಿ. ಕೆಲಸದ ಒತ್ತಡ ನಿಭಾಯಿಸುವ ಶಕ್ತಿಯನ್ನು

ಒಟ್ಟು ಮಾಡಿಟ್ಟುಕೊಳ್ಳಿ. ಗುರಿ ತುಂಬಾ ದೂರವಿದೆ.

 

ತುಲಾ

ಸೂರ್ಯನ ಕಿರಣಗಳು ಭೂಮಿಗೆ ತಾಗುವ

ಮೊದಲೇ ಕಣ್ಣು ಬಿಟ್ಟರೆ ದಿನವಿಡೀ ಹರುಷ.

ಸೋಮಾರಿತನಕ್ಕೆ ಮದ್ದಿಲ್ಲ. ಇಷ್ಟು ದಿನದ ಸೋಲಿಗೆ

ಮುಕ್ತಿ ಸಿಗುವ ಲಕ್ಷಣ. ಏಳಿ ಎದ್ದೇಳಿ. ಕೆಲಸದಲ್ಲಿ ತೊಡಗಿಕೊಳ್ಳಿ.

ಸಮಪ್ರಮಾಣದಲ್ಲಿ ಶ್ರಮ ಮತ್ತು ಬುದ್ಧಿವಂತಿಕೆ ಬೆರೆಸಿದರೆ ಹಾದಿ

ಸುಗಮ. ತುಂಬಾ ಯೋಚಿಸದಿರಿ. ನಿಮ್ಮ ಕೆಲಸ ನೀವು ಮಾಡಿ.

 

ವೃಶ್ಚಿಕ

ಅತಿ ಭಾವುಕತೆ ಒಳ್ಳೆಯದಲ್ಲ. ಎಲ್ಲಾ ಕಾಲದಲ್ಲಿಯೂ

ಬಾಡಿಯೇ ಇದ್ದರೆ ಹೂವಿಗೆ ಬೆಲೆಯಿಲ್ಲ. ಅರಳೋ

ಕಾಲದಲ್ಲಿ ಮೊಗ್ಗು ಅರಳಬೇಕು. ಹೂವಾಗಿ ಅರಳಿ

ಆಮೇಲೆ ಬಾಡಬೇಕು. ನಿಮ್ಮ ಬದುಕು ಅರಳುವ ಸಮಯ. ಅತಿ

ಭಾವುಕತೆಯನ್ನು ಕಟ್ಟಿಟ್ಟು ಪಕ್ಕಕ್ಕಿಡಿ. ಜಗತ್ತು ನೀವಂದುಕೊಂಡ

ಹಾಗೆ ಇಲ್ಲ. ಸ್ವಲ್ಪ ಗಟ್ಟಿಯಾಗಿ. ನಿಮ್ಮವರಿಗೆ ಮಾತ್ರ ಮೃದುವಾಗಿರಿ.

 

ಧನಸ್ಸು

ಮನಸ್ಸು ಮಳೆ ಬಿದ್ದ ಭೂಮಿಯಂತಾಗಿದೆ. ಸ್ವಲ್ಪ ಒದ್ದೆ.

ಸ್ವಲ್ಪ ಮೃದು. ಬಹಳ ದಿನಗಳಿಂದ ಒತ್ತಡದಿಂದ ಕಾಲ

ಕಳೆದಿದ್ದೀರಿ. ಈಗ ಮಳೆ ಬಂದಿದೆ. ಸಂತೋಷ ಬರಲು

ಜಾಸ್ತಿ ಕಾಲವಿಲ್ಲ. ಇಷ್ಟು ದಿನ ಕಾದಿದ್ದೀರಿ. ಇನ್ನೊಂಚೂರು ಕಾದರೆ

ಗೆಲುವು ನಿಮ್ಮದೇ. ಬದುಕೂ ನಿಮ್ಮದೇ.

 

ಮಕರ

ಮೌನವಾಗಿದ್ದಷ್ಟೂ ಒಳ್ಳೆಯದು. ವ್ಯಾಪಾರಕ್ಕೆ

ಸಂಬಂಧಿಸಿದಂತೆ ಯಾವ ಕಾರಣಕ್ಕೂ

ದುಡುಕಕೂಡದು. ಎರಡು ದಿನ ಆಗಿ ಹೋಗಲಿ.

ನಿರ್ಧಾರಕ್ಕೆ ಸೋಲಾಗದಿರಲಿ. ಮನೆಯಲ್ಲಿ ಮುನಿಸು ತರವಲ್ಲ.

ಎಲ್ಲರೂ ಜೊತೆಯಾಗಿರಬೇಕಾದ ಸಮಯವಿದು.

 

ಕುಂಭ

ನಕ್ಕಂತೆ ಇರುವ ಸಿರಿಮೊಗದ ಮಂದಿ ಭವಿಷ್ಯದ

ಕುರಿತು ಚಿಂತೆ ಮಾಡಲಾರರು. ಆದರೂ ಒಂದು

ಸಲಹೆಯುಂಟು. ಈ ವಾರ ನಿಮಗಲ್ಲ. ದೊಡ್ಡ ದೊಡ್ಡ

ನಿರ್ಧಾರವೇನಿದ್ದರೂ ಮುಂದಕ್ಕೆ ಇರಲಿ. ದೇಹದ ಮಾತು

ಕೇಳುವ ಸಂದರ್ಭ ಎದುರಿಗಿದೆ. ಧಿಕ್ಕರಿಸಿ ನಡೆಯುವುದು

ಒಳಿತಲ್ಲ. ಆರಾಮಾಗಿ ಸಾಗಿ. ಸಮಯ ತುಂಬಾ ಇದೆ.

 

ಮೀನ

ಮನಸ್ಸು ಚಂಚಲ. ಏನೋ ಅಂದುಕೊಂಡಿದ್ದರೂ ಆ

ಕಡೆಗೆ ಗಮನ ಹರಿಸಲು ಆಗುತ್ತಿಲ್ಲ. ಹಾಗಾಗಿ

ದುಗುಡ. ಮೀನಿನ ಹೆಜ್ಜೆ ಅರಿತವರಿಲ್ಲ. ಯಾವುದು

ಯಾವಾಗ ಆಗಬೇಕೋ ಅದು ಆಗೇ ಆಗುತ್ತದೆ. ನಿಮ್ಮ

ಮನಸ್ಸಲ್ಲಿರುವ ಕೆಲಸ ಆಗುವ ಲಕ್ಷಣವಿದೆ. ಗಮನ ಹರಿಸಿ.

Follow Us:
Download App:
  • android
  • ios