Asianet Suvarna News Asianet Suvarna News

'ಸಭ್ಯ ಸಮಂಜಸ' ಮಧ್ಯಸ್ಥಿಕೆ: ಭಾರತ-ಪಾಕ್ ಟೆನ್ಶನ್ ದೂರಾಗಲಿದೆ ಎಂದ ಟ್ರಂಪ್!

ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣ| ಭಾರತ-ಪಾಕ್ ನಡುವೆ ಅಮೆರಿಕ ಮಧ್ಯಸ್ಥಿಕೆ?| ಸಭ್ಯ ಸಮಂಜಸ ಮಧ್ಯಸ್ಥಿಕಿಗೆ ಸಿದ್ಧ ಎಂದ ಅಮೆರಿಕ| ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ| ಅಮೆರಿಕದ ಮಧ್ಯಸ್ಥಿಕೆ ಪರಿಣಾಮವಾಗಿ ಪರಿಸ್ಥಿತಿ ಶಾಂತವಾಗಲಿದೆ ಎಂದ ಟ್ರಂಪ್|

US President Donald Trump Says India-Pak Tension End Soon
Author
Bengaluru, First Published Feb 28, 2019, 3:48 PM IST

ಹನೋಯಿ(ಫೆ.28): ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಗುವಿನ ವಾತಾವರಣ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ.

"

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್, 'ಸಭ್ಯ ಸಮಂಜಸ' ಮಧ್ಯಸ್ಥಿಕೆ ಪರಿಣಾಮವಾಗಿ ಭಾರತ-ಪಾಕ್ ನಡುವಿನ ವೈಮನಸ್ಸು ಕಡಿಮೆಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇನ್ನು ಟ್ರಂಪ್ ಹೇಳಿಕೆ ತೀವ್ರ ಕುತೂಹಲ ಮೂಡಿಸಿದ್ದು, ಭಾರತ-ಪಾಕ್ ನಡುವೆ ಅಮೆರಿಕ ಮಧ್ಯಸ್ಥಿಕೆ ವಹಿಸಲಿದೆಯೇ ಅಥವಾ ಮಧ್ಯಸ್ಥಿಕೆಗೆ ಅಮೆರಿಕ ಒಲವು ತೋರುತ್ತಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.

ಭಾರತ-ಪಾಕ್ ಎರಡೂ ರಾಷ್ಟ್ರಗಳು ಯುದ್ಧಕ್ಕೆ ಸಜ್ಜಾಗದಂತೆ ತಡೆಯಲು ನಾವು ಬದ್ಧ ಎಂದಿರುವ ಟ್ರಂಪ್, ಅಮೆರಿಕದ ಮಧ್ಯಸ್ಥಿಕೆ ಪರಿಣಾಮವಾಗಿ ಪರಿಸ್ಥಿತಿ ಶಾಂತವಾಗಲಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios