ರೇಪ್ ಮಾಡಿ ಯಜ್ಞಕುಂಡದಲ್ಲಿ ಮಹಿಳೆ ಸುಟ್ಟ ಪಾಪಿಗಳು!

UP woman first gang-raped by 5, then burnt alive in temple
Highlights


ಉತ್ತರಪ್ರದೇಶದಲ್ಲಿ ನಡೆಯಿತು ಮತ್ತೊಂದು ಘೋರ ದುರಂತ

ಮಹಿಳೆ ಮೇಲೆ ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ದೇವಸ್ಥಾನದ ಯಜ್ಞ ಕುಂಡದಲ್ಲಿ ಜೀವಂತ ಸುಟ್ಟು ಹಾಕಿದ ಪಾಪಿಗಳು

ಬರೇಲಿ(ಜು.15): ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಳಿಕ ಆಕೆಯನ್ನು ದೇವಸ್ಥಾನದ ಹೋಮಕುಂಡದಲ್ಲಿ ಜೀವಂತ ಸುಟ್ಟು ಹಾಕಿದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇಲ್ಲಿಒನ ಸಂಬಾಲ್ ಜಿಲ್ಲೆಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಐವರು ಕಾಮುಕರು, ಆಕೆಯನ್ನು ದೇವಸ್ಥಾನಕ್ಕೆ ಎಳೆದೊಯ್ದು ಯಜ್ಞಶಾಲೆಯಲ್ಲಿ ಜೀವಂತವಾಗಿ ದಹಿಸಿದ್ದಾರೆ. ಸಾಯುವ ಮುನ್ನ ಮಹಿಳೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಆಕೆಯ ಪತಿ ಘಾಜಿಯಾಬಾದ್ ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿಯೇ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅಮರ್ ಸಿಂಗ್, ಮಹಾವೀರ್, ಚರಣ್ ಸಿಂಗ್, ಗುಲ್ಲು ಮತ್ತು ಕುಮಾರ್ ಪಾಲ್ ಆರೋಪಿಗಳೆಂದು ಗುರುತಿಸಲಾಗಿದ್ದು, ಎಲ್ಲರೂ ಅದೇ ಗ್ರಾಮದ ನಿವಾಸಿಗಳಾಗಿದ್ದಾರೆ.

ಏಕಾಏಕಿ ಮನೆಗೆ ನುಗ್ಗಿದ ಪಾಪಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ದೇವಸ್ಥಾನದವರೆಗೆ ಎಳೆದೊಯ್ದು ಯಜ್ಞಕುಂಡದಲ್ಲಿ ತಳ್ಳಿದ್ದಾರೆ. ಈ ಕುರಿತು ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader