ಲಕ್ನೋ(ನ.26) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರೀತಿಯ ಶ್ವಾನ ಇಂಟರ್ ನೆಟ್ ಸೆಲಬ್ರಿಟಿಯಾಗಿ ಬದಲಾಗಿದೆ. ಕಪ್ಪು ಬಣ್ಣದ ಲ್ಯಾಬ್ರೊಡಾರ್  ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ಕಪ್ಪು ಬಣ್ಣದ ಲ್ಯಾಬ್ರೊಡಾರ್  ಶ್ವಾನದ ಹೆಸರು ಕಾಲು. ಗೋರಖ್ ಪುರಕ್ಕೆ ಯೋಗಿ ಆದಿತ್ಯನಾಥ್ ಯಾವಾಗ ಆಗಮಿಸಿದರೂ ಈ ಶ್ವಾನ ಅವರ ಹತ್ತಿರಕ್ಕೆ ಹೋಗುತ್ತದೆ. ಕುಣಿದಾಡುತ್ತದೆ. ಯೋಗಿ ಸಹ ಒಂದಿಷ್ಟು ಸಮಯ ಕಳೆಯುತ್ತಾರೆ.

ಪನ್ನೀರ್ ಅನ್ನು ಯೋಗಿ ಶ್ವಾನಕ್ಕೆ ನೀಡುತ್ತಿರುವ ಸಂದರ್ಭದಲ್ಲಿ ಒಂದಿಷ್ಟು ಪೋಟೋಗಳು ಕ್ಲಿಕ್ ಆಗಿವೆ. ಯೋಗಿ ಸಿಎಂ ಆಗಿ ಮೂರು ತಿಂಗಳ ನಂತರ ಕಾಲು ನನ್ನು ಗೋರಕ್ಷ ದೇವಾಲಯಕ್ಕೆ ಕರೆತರಲಾಯಿತು. ಇದಕ್ಕೂ ಮೊದಲು ಯೋಗಿ ಬಳಿ ಇದ್ದ ರಾಜಾ ಬಾಬು ಹೆಸರಿನ ಶ್ವಾನ ಮೃತಪಟ್ಟಿತ್ತು.

ಬೆಳಗಾವಿಯಲ್ಲಿ ಪೊಲೀಸ್ ಶ್ವಾನಕ್ಕೆ ಸಿಎಂ ಬಿಎಸ್ ವೈ ನಮಸ್ಕಾರ: ವಿಡಿಯೋ

ಶ್ವಾನವನ್ನು ಯೋಗಿಗೆ ದೆಹಲಿಯಲ್ಲಿ ದೇವಾಲಯವೊಂದರ ಸಿಬ್ಬಂದಿ ಕೊಡುಗೆಯಾಗಿ ನೀಡಿದ್ದರು. ಈ ಶ್ವಾನ ಕೊಡುಗೆಯಾಗಿ ಸಿಕ್ಕ ಮೇಲೆ ಯೋಗಿಯ ಅದೃಷ್ಟ ಬದಲಾಯಿತು ಎಂಬ ಮಾತು ಇದೆ.

ಕಾಲು ಸಂಪೂರ್ಣ ಸಸ್ಯಹಾರಿ. ಹಾಲು ಮತ್ತು ರೋಟಿ ಅದರ ಪ್ರಮುಖ ಆಹಾರ. ಯೋಗಿ ಆದಿತ್ಯನಾಥರ ಅನುಪಸ್ಥಿತಿಯಲ್ಲಿ ಈ ಶ್ವಾನದ ಜವಾಬ್ದಾರಿಯನ್ನು ಅವರ ಪಟ್ಟದ ಶಿಷ್ಯ ಹಿಮಾಲಯ ಗಿರಿ ವಹಿಸಿಕೊಳ್ಳುತ್ತಾರೆ.

ಯೋಗಿ ಆದಿತ್ಯನಾಥ್ ದೇವಾಲಯದಲ್ಲಿ ಇರುವಷ್ಟು ಸಮಯವೂ ಕಾಲು ಅವರ ಜತೆಗೆ ಇರುತ್ತದೆ. ಶ್ವಾನದ ನಿರ್ವಹಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.