ಬಿಕಾನೇರ್(ನ.4): ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಹಿಂದೂ ಭಕ್ತರ ಆಶಯಗಳು ದೀಪಾವಳಿಯ ಬಳಿಕ ಶೀಘ್ರವೇ ನಿಜವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ರಾಜಸ್ಥಾನದ ಬಿಕಾನೇರ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ಈ ಬಾರಿ ನಮಗೆಲ್ಲಾ ಶ್ರೀರಾಮ ಬೆಳಕು ತೋರಲಿದ್ದಾನೆ. ದೀಪಾವಳಿ ಹಬ್ಬದ ಬಳಿಕ ಶೀಘ್ರವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಪ್ರತಿಯೊಬ್ಬ ಹಿಂದೂವಿನ ಬಯಕೆಯಾಗಿದ್ದು, ಪ್ರಭು ಶ್ರೀರಾಮನ ಆಶೀರ್ವಾದದಿಂದ ಈ ಕನಸು ಈಡೇರಲಿದೆ ಎಂದು ಆದಿತ್ಯನಾಥ್ ಭರವಸೆ ವ್ಯಕ್ತಪಡಿಸಿದರು.