ಬೆಂಗಳೂರು[ಫೆ.09] 2019ರ ಮೊದಲ ಮಳೆ ರಾಜಧಾನಿಯಲ್ಲಿ ಸುರಿದಿದೆ. ಕೊಡಗು, ಕೋಲಾರ, ಚಿಕ್ಕಮಗಳೂರಿನಲ್ಲಿ ಕಳೆದ ಎರಡು ದಿನಗಳಲ್ಲಿ ಸುರಿದ ಮಳೆ ಶನಿವಾರ ಬೆಂಗಳೂರಿನ ಕಡೆ ಬಂದಿದೆ.

ಸಾಧಾರಣ ಮಳೆಯಾಗಿದ್ದು ಬೆಳೆಗಳಿಗೆ ಅಂಥ ಹಾನಿಯಾಗುವ ಸಂಭವ ಕಡಿಮೆ. ಒಂದು ವೇಳೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾದರೆ ಮಾವು ಬೆಳೆಗೆ ತೊಂದರೆ ಆಗಲಿದೆ.  ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿಯೂ ಮಳೆಯಾಗಿದೆ.

ಬೆಂಗಳೂರಿನಲ್ಲಿ ಸಂಜೆ ಧಾರಾಕಾರ ಮಳೆ ಸುರಿದಿದ್ದು ಟ್ರಾಫಿಕ್ ಜಾಮ್ ನಿಂದ  ಸವಾರರು ಪರಿತಪಿಸುತ್ತಿದ್ದಾರೆ. ಗಾಂಧಿನಗರ, ಶಿವಾನಂದ ವೃತ್ತ, ಮೆಜೆಸ್ಟಿಕ್, ರೇಸ್‌ ಕೋರ್ಸ್ ಸುತ್ತಮುತ್ತಲೂ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಹೇಳುವಂತೆ ಮುಂದಿನ 48 ಗಂಟೆ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ.

"

 

"