ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಬೆಂಗಳೂರಿಗೆ ರೇಪ್ ಸಿಟಿ ಎನ್ನುವ ಹೆಸರು: ಅನಂತ್ ಕುಮಾರ್

First Published 11, Mar 2018, 2:17 PM IST
Union Minister Ananthkumar Slams Karnataka Govt
Highlights

ಸಿದ್ದರಾಮಯ್ಯ ಸರ್ಕಾರವನ್ನು ಬಿಹಾರದ ಲಾಲೂ ಪ್ರಸಾದ್ ಯಾದವ್ ಸರ್ಕಾರಕ್ಕೆ ಹೋಲಿಸಿ ಕೇಂದ್ರ ಸಚಿವ ಅನಂತ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.  ಅಲ್ಲಿನಂತೆ ಇಲ್ಲಿಯೂ ಕೂಡ ಜಂಗಲ್ ರಾಜ್ ಸರ್ಕಾರವಿದೆ.

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರವನ್ನು ಬಿಹಾರದ ಲಾಲೂ ಪ್ರಸಾದ್ ಯಾದವ್ ಸರ್ಕಾರಕ್ಕೆ ಹೋಲಿಸಿ ಕೇಂದ್ರ ಸಚಿವ ಅನಂತ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.  ಅಲ್ಲಿನಂತೆ ಇಲ್ಲಿಯೂ ಕೂಡ ಜಂಗಲ್ ರಾಜ್ ಸರ್ಕಾರವಿದೆ.

ಬೆಂಗಳೂರಿಗೆ ರೇಪ್ ಸಿಟಿ ಎಂಬ ಹೆಸರು ಸಿದ್ದರಾಮಯ್ಯ ಕಾಲದಲ್ಲಿ ಬಂದಿದೆ. ಸುಮ್ಮನೇ ಯಾವುದೋ ಅಂಕಿ ಸಂಖ್ಯೆಯನ್ನು ನೀಡಿದರೆ ಜನರು ನಂಬುವುದಿಲ್ಲ. ಕುಂಟು ನೆಪ ಹೇಳಿ ಇಂತಹ ಅಂಕಿ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನರೇ ನಿಮಗೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ ನಡೆಸಲಾಗುತ್ತಿದೆ.ಬೆಂಗಳೂರನ್ನು ರಕ್ಷಣೆ ಮಾಡುವ ಬಿಜೆಪಿಯನ್ನೇ ಜನರು ಆಯ್ಕೆ ಮಾಡುತ್ತಾರೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

loader