ನವದೆಹಲಿ[ಫೆ.04] ಮಹಿಳೆಯರು ಇನ್ನು ಮುಂದೆ ಕಲ್ಲಿದ್ದಲು ಗಣಿಗಾರಿಕೆಯ ಅಂಡರ್ ಗ್ರೌಂಡ್‌ನಲ್ಲಿ ಕೆಲಸ ಮಾಡಬಹುದು. ಇದು ಉದ್ಯೋಗ ಅವಕಾಶಗಳ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಕಾರ್ಮಿಕ ಇಲಾಖೆ ಮಹತ್ವದ ತಿದ್ದುಪಡಿಗೆ ಅಸ್ತು  ಎಂದಿದೆ.  ಈಗಿರುವ ಕಾನೂನು ಅಂಡರ್ ಗ್ರೌಂಡ್ ನಲ್ಲಿ ಮಹಿಳೆಯರು ಕೆಲಸ ಮಾಡದಂತೆ ನಿರ್ಬಂಧ ಹೇರುತ್ತಿದೆ. ಆದರೆ ಹೊಸ ಕಾನೂನು ಮಹಿಳೆಯರು ಯಾವ ಶಿಫ್ಟ್‌ನಲ್ಲಿ ಬೇಕಾದರೂ ಕೆಲಸ ಮಾಡಬಹುದು ಎಂದು ಹೇಳುತ್ತದೆ.

ಈ ಶತಮಾನದ ಮಾದರಿ ಹೆಣ್ಣಿಗೆ ಒಂಟಿತನವೇ ಎಲ್ಲ! ಪುರುಷ ಸಂಗ ಬೇಕೆಂದೇನೂ ಇಲ್ಲ

ಕಲ್ಲಿದ್ದಲು ಗಣಿಯಲ್ಲಿ ಸದ್ಯ 3 ಲಕ್ಷ ಜನ ಕೆಲಸ ಮಾಡುತ್ತಾರೆ ಎಂದು ಅಂಕಿ ಅಂಶ ಹೇಳುತ್ತದೆ. ಇದರಲ್ಲಿ ಶೇ. 15-20 ರಷ್ಟು ಜನ ಮಹಿಳೆಯರಿದ್ದಾರೆ. ಉದ್ಯೋಗ ಅವಕಾಶ ಹೆಚ್ಚಳದೊಂದಿಗೆ ಮಹಿಳೆಯರಿಗೆ ಮುಕ್ತ ಅವಕಾಶ ಮಾಡಿಕೊಡಲಿದೆ ಎಂದು ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.