Asianet Suvarna News Asianet Suvarna News

ರೇಪ್‌ಗಳಿಗೆ ನಿರುದ್ಯೋಗ ಕಾರಣ: ಬಿಜೆಪಿ ಶಾಸಕಿ!

ನಿರುದ್ಯೋಗ ಹಾಗೂ ಹತಾಶೆಯೇ ಅತ್ಯಾಚಾರ ಹೆಚ್ಚಾಗಲು ಕಾರಣ! ಹರಿಯಾಣ ಬಿಜೆಪಿ ಶಾಸಕಿ ಪ್ರೇಮಲತಾ ವಿವಾದಾತ್ಮಕ ಹೇಳಿಕೆ! ನಿರುದ್ಯೋಗದಿಂದ ಬೇಸತ್ತ ಯುವಕರು ಅತ್ಯಾಚಾರ ಮಾಡುತ್ತಿದ್ದಾರೆ

Unemployed, frustrated youth commit rape: BJP lawmaker
Author
Bengaluru, First Published Sep 15, 2018, 5:56 PM IST
  • Facebook
  • Twitter
  • Whatsapp

ಚಂಡೀಗಡ್(ಸೆ.15): ನಿರುದ್ಯೋಗ ಹಾಗೂ ಹತಾಶೆಯಿಂದ ಬಳಲಿದ ಯುವಕರಿಂದಾಗಿಯೇ ಅತ್ಯಾಚಾರದಂತ ಅಪರಾಧ ಪ್ರಕರಣಗಳು ನಡೆಯುತ್ತವೆ ಎಂದು ಹರಿಯಾಣದ ಬಿಜೆಪಿ ನಾಯಕಿ ಹಾಗೂ ಶಾಸಕಿ ಪ್ರೇಮಲತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕಿ ಪ್ರೇಮಲತಾ, ಸಮಾಜದಲ್ಲಿ ನಿರುದ್ಯೋಗದಿಂದ ಬೇಸತ್ತ ಯುವಕರು ಇಂಥಹ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದ್ದಾರೆ.

ಹರಿಯಾಣದ ನಾರ್ನಾಲ್ ನಲ್ಲಿ  19 ವರ್ಷದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ ಪ್ರೇಮಲತಾ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಿವಾರಿ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಘಾತಕ್ಕೊಳಗಾಗಿದ್ದ ಆಕೆ ಸದ್ಯ ಚೇತರಿಸಿಕೊಳ್ಳುತ್ತಿದ್ದಾಳೆ, ಆಕೆ ಎಲ್ಲಾ ರೀತಿ ವೈದ್ಯಕೀಯ ಪರಿಕ್ಷೆ ಮುಗಿದಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.

Follow Us:
Download App:
  • android
  • ios