ಬೆಂಗಳೂರು(ಫೆ.05)  ಭೂಗತ ಪಾತಕಿಗೆ ಮಂಡ್ಯ ನಂಟು?ಭೂಗತ ಪಾತಕಿ ರವಿ ಪೂಜಾರಿಗೆ ಮಂಡ್ಯ  ವಿಳಾಸದ ಪಾಸ್‌ಪೋರ್ಟ್‌ ನೀಡಲಾಗಿದೆಯೇ? ಎಂಬ ಸುದ್ದಿ ದೃಢವಾಗಿದೆ.

ಆ್ಯಂಟನಿ ಫೆರ್ನಾಂಡಿಸ್‌ ಎಂಬ ಅಹೆಸರಿನಡಿ ಮಾಡಿಸಲಾಗಿರುವ ಪಾಸ್‌ಪೋರ್ಟ್‌ನ್ನೇ ರವಿ ಪೂಜಾರಿ ಬಳಸಿದ್ದಾನೆ. ರವಿಪೂಜಾರಿ ಬಂಧನದ ವೇಳೆ ಆ್ಯಂಟನಿ ಫೆರ್ನಾಂಡಿಸ್‌ ಹೆಸರಿನ ಪಾಸ್‌ಪೋರ್ಟ್‌ ಪೋಲಿಸರಿಗೆ ಸಿಕ್ಕಿತ್ತು  ರವಿ ಪೂಜಾರಿ ಜೊತೆ ನಿಕಟ ಸಂಪರ್ಕ ಹೊಂದಿರುವವರೆ ಈ ನಕಲಿ ಪಾಸ್‌ಪೋರ್ಟ್‌ ಮಾಡಿಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.

ಭೂಗತ ಪಾತಕಿ ರವಿ ಪೂಜಾರಿ ಖಾಕಿ ಖೆಡ್ಡಾಕ್ಕೆ ಬಿದ್ದ ರೋಚಕ ಕಥೆ!

ರವಿ ಪೂಜಾರಿ ನಕಲಿ ಪಾಸ್‌ಪೋರ್ಟ್‌ ನಲ್ಲಿ ತಾನೂ ಮೈಸೂರು ಮೂಲದವನು ಎಂಬ ವಿಳಾಸ ನೀಡಿದ್ದಾನೆ ಎನ್ನಲಾಗಿದೆ.  ಶ್ರೀಲಂಕಾ ಸೇರಿದಂತೆ ಇನ್ನಿತರ ದೇಶಗಳಲ್ಲಿ ನಕಲಿ ಪಾಸ್‌ಪೋರ್ಟ್‌ ಹೊಂದಿರುವ ರವಿಪೂಜಾರಿ ಸದ್ಯ ವಿಚಾರಣೆ ಎದುರಿಸುತ್ತಿದ್ದಾನೆ.

ರವಿಪೂಜಾರಿ ಆಪ್ತರು ಮಂಡ್ಯದಿಂದ ಪಾಸ್‌ಪೋರ್ಟ್‌ ಮಾಡಿಸಿ ವರ್ಷದ ಹಿಂದಯೇ ರವಿಪೂಜಾರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ರವಿ ಪೂಜಾರಿ ಕೊಟ್ಟ ಮಿಸ್ಡ್ ಕಾಲ್‌ಗಳು