ದುಬೈ : ಯುಎಇ ನ್ಯಾಷನಲ್ ಕ್ಯಾರಿಯರ್ ಎಮಿರೇಟ್ಸ್ 175 ಟನ್ ಪರಿಹಾರ ಸಾಮಾಗ್ರಿಗಳನ್ನು ಹೊತ್ತು ಕೇರಳಕ್ಕೆ ಹಾರಲಿದೆ. 

ಪ್ರವಾಹ ಪೀಡಿತ ಕೇರಳಕ್ಕೆ ಈ ಮೂಲಕ ನೆರವಿನ ಹಸ್ತ ಚಾಚುತ್ತಿದೆ.  ಭಾರೀ ಪ್ರವಾಹದಿಂದ ತತ್ತರಿಸಿದ್ದ ಕೇರಳಕ್ಕೆ ಡಜನ್ ನಷ್ಟು ವಿಮಾನಗಳು ಪರಿಹಾರ ಸಾಮಾಗ್ರಿಗಳನ್ನು ಹೊತ್ತು ತರಲಿವೆ. 

ಯುಎಇಯ ಅನೇಕ ಬ್ಯುಸಿನೆಸ್ ಮನ್ ಗಳು, ಸಂಘಟನೆಗಳು ನೀಡಿರುವ ಸಾಮಾಗ್ರಿಗಳಾದ ಬ್ಲಾಂಕೆಟ್, ಬೋಟ್, ಆಹಾರ ಸಾಮಾಗ್ರಿಗಳನ್ನು ಕಳುಹಿಸಲಾಗುತ್ತದೆ. 

ಈ ಬಾರೀ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಉಂಟಾದ ಪ್ರವಾಹವು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತ ಮಾಡಿದ್ದು ಮತ್ತೆ ಬದುಕು ಕಟ್ಟಿಕೊಳ್ಳಲು ಇಲ್ಲಿನ  ಜನ ಹರಸಾಹಸ ಪಡುತ್ತಿದ್ದಾರೆ.  ಎಲ್ಲೆಡೆಯಿಂದಲೂ ಕೂಡ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. 

ಇದೀಗ ಯುಎಇಯಿಂದಲೂ ಕೂಡ ಅತ್ಯಧಿಕ ಪ್ರಮಾಣದಲ್ಲಿ ನೆರವು ಹರಿದುಬರುತ್ತಿದೆ. 

ಕೇರಳ ಪ್ರವಾಹಕ್ಕೆ 700 ಕೋಟಿ ಘೋಷಿಸಿಲ್ಲ : ಯುಎಇ ಸ್ಪಷ್ಟನೆ ‘ಯುಎಇ ದುಡ್ಡಿಗಾಗಿ ಮೋದಿ ಜೊತೆ ಮಾತಾಡ್ತೀನಿ ಬಿಡಿ’!