Asianet Suvarna News Asianet Suvarna News

ಹೆಣ್ಣಿನ ವೇಷ ಹಾಕಿ ನಟನಿಗೆ ವಂಚನೆ

ಮಂಗಳೂರಿನ ವ್ಯಕ್ತಿಯೊಬ್ಬರ ಪರಿಚಯ ಮಾಡಿಕೊಂಡು ಬಳಿಕ ಬ್ಲಾಕ್‌ ಮೇಲ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಬೆಂಗಳೂರಿನ ಪ್ರಥಮ ಪಿಯು ವಿದ್ಯಾರ್ಥಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಉರ್ವ ಠಾಣೆ ಪೊಲೀಸರು ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಮಂಗಳವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
 

Two Arrested Who Cheated To Actor
Author
Bengaluru, First Published Oct 4, 2018, 9:00 AM IST
  • Facebook
  • Twitter
  • Whatsapp

ಮಂಗಳೂರು : ಹುಡುಗಿಯ ವೇಷ ಹಾಕಿ ಫೇಸ್‌ಬುಕ್‌ನಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರ ಪರಿಚಯ ಮಾಡಿಕೊಂಡು ಬಳಿಕ ಬ್ಲಾಕ್‌ ಮೇಲ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಬೆಂಗಳೂರಿನ ಪ್ರಥಮ ಪಿಯು ವಿದ್ಯಾರ್ಥಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಉರ್ವ ಠಾಣೆ ಪೊಲೀಸರು ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಮಂಗಳವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರಿನ ಯಶವಂತಪುರ ಸುಭೇದಾರ್‌ ಪಾಳ್ಯದ 4ನೇ ಕ್ರಾಸ್‌ ನಿವಾಸಿ ಆದಿತ್ಯ (19), ರಾಮನಗರ ಕನಕಪುರದ ಬಸವೇಶ್ವರ ನಗರ ಹಳೆ ಸೈಂಟ್‌ ಮೈಕೆಲ್‌ ಶಾಲೆ ಎದುರು ನಿವಾಸಿ ಅರುಣ್‌ ಎಚ್‌.ಎಸ್‌. (27) ಬಂಧಿತರು. ಆದಿತ್ಯ ಹೆಣ್ಣಿನ ವೇಷ ಹಾಕಿ ಫೇಸ್‌ಬುಕ್‌ನಲ್ಲಿ ಫೋಟೊಗಳನ್ನು ಅಪ್‌ಲೋಡ್‌ ಮಾಡಿ ಮಂಗಳೂರಿನ ತುಳು ಚಿತ್ರನಟರೊಬ್ಬರೊಂದಿಗೆ ತನ್ನನ್ನು ಅಶ್ವಿನಿ ಎಂದು ಪರಿಚಯಿಸಿಕೊಂಡಿದ್ದ. ಆದಿತ್ಯನ ಸ್ವರ ಕೂಡ ಹೆಣ್ಣಿನಂತೆಯೇ ಇದ್ದುದರಿಂದ ಮಂಗಳೂರಿನ ವ್ಯಕ್ತಿಗೂ ಗೊತ್ತಾಗಿರಲಿಲ್ಲ. ಕೆಲ ದಿನಗಳ ಬಳಿಕ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಆದಿತ್ಯ ಕೇಳಿದ್ದು, ಅದರಂತೆ ಇವರೂ ಕಳುಹಿಸಿದ್ದರು. ಈ ಚಿತ್ರಗಳನ್ನೇ ಇಟ್ಟುಕೊಂಡು ಬ್ಲಾಕ್‌ಮೇಲ್‌ ಶುರು ಹಚ್ಚಿಕೊಂಡ ಆದಿತ್ಯ, .65 ಸಾವಿರ ವಸೂಲಿ ಮಾಡಿದ್ದ.

ಹಣ ನೀಡಿದ ಬಳಿಕವೂ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ರೋಸಿಹೋದ ಮಂಗಳೂರಿನ ನಟ, ಉರ್ವ ಪೊಲೀಸರಿಗೆ ದೂರು ನೀಡಿದ್ದರು. ಈ ಸಂದರ್ಭ ಎರಡನೇ ಆರೋಪಿ ಅರುಣ್‌ ಎಚ್‌.ಎಸ್‌. ಪ್ರಕರಣದಲ್ಲಿ ಎಂಟ್ರಿ ನೀಡಿದ್ದು, ರಾಜಕಾರಣಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ನಟನಿಗೆ ಕರೆ ಮಾಡಿ ಬೆದರಿಸುತ್ತಿದ್ದ.

Follow Us:
Download App:
  • android
  • ios