ತುಮಕೂರು: ಎದೆನಡುಗಿಸುವ ಅಪಘಾತ ಸಿಸಿಟಿವಿಯಲ್ಲಿ ಸೆರೆ

ಚಲಿಸುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಬೆಸ್ಕಾಂ ಮುಂಭಾಗ ಈ ಘಟನೆ ನಡೆದಿದೆ. 58 ವರ್ಷದ ಲಕ್ಷ್ಮಯ್ಯ ಎಂಬಾತನೇ ಮೃತ ದುರ್ದೈವಿ. ರಸ್ತೆಯಲ್ಲಿನ ಹಂಪ್ ಬಳಿ ಲಕ್ಷ್ಮಯ್ಯ ಸ್ಕಿಡ್ ಆಗಿ, ಹಿಂಬದಿಯಿಂದ ಬರುವ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪುವ ಎದೆನಡುಗಿಸುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments 0
Add Comment