ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಲಿದ್ದಾರೆ ಹಿಂದೂ ಮಹಿಳೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jan 2019, 5:24 PM IST
Tulsi Gabbard Announces 2020 Presidential Election Against Donald Trump
Highlights

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಮೆರಿಕ ಕಾಂಗ್ರೆಸ್ ಗೆ ಆಯ್ಕೆಯಾಗಿರುವ ಪ್ರಥಮ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲಿದ್ದಾರೆ. 

ವಾಷಿಂಗ್ಟನ್(ಜ.12): 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಮೆರಿಕ ಕಾಂಗ್ರೆಸ್ ಗೆ ಆಯ್ಕೆಯಾಗಿರುವ ಪ್ರಥಮ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲಿದ್ದಾರೆ. 

ತಾವು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು ಈ ಸಂಬಂಧ ಇನ್ನೊಂದು ವಾರದೊಳಗೆ ಅಧಿಕೃತ ಘೋಷಣೆ ಮಾಡುವುದಾಗಿ ತುಳಸಿ ಗಬ್ಬಾರ್ಡ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತುಳಸಿ ಸ್ಪರ್ಧೆ ಖಚಿತವಾಗಿದ್ದು, ಇದೇ ಚುನಾವಣೆಗೆ ಸ್ಪರ್ಧಿ ಎಂದು ಹೇಳಲಾಗುತ್ತಿರುವ ಕಮಲಾ ಹ್ಯಾರೀಸ್ ಅವರನ್ನು ಎದುರಿಸಲಿದ್ದಾರೆ.

ಇನ್ನು ಹ್ಯಾರೀಸ್ ತಾಯಿ ಭಾರತೀಯ ಮೂಲದವರಾಗಿದ್ದರೆ ತಂದೆ ಆಫ್ರಿಕನ್ ರಾಷ್ಟ್ರದವರಾಗಿದ್ದಾರೆ. ಆದರೆ ಹ್ಯಾರೀಸ್ ತಮ್ಮನ್ನು ಆಫ್ರಿಕನ್ ಎಂದು ಕರೆದುಕೊಳ್ಳುವ ಕಾರಣ ಅಮೆರಿಕದಲ್ಲಿನ ಭಾರತೀಯರಿಗೆ ಆಕೆಯ ಬಗ್ಗೆ ಅಸಮಾಧಾನವಿದೆ. 

ಇದೀಗ ಹ್ಯಾರೀಸ್ ಎದುರು ತುಳಸಿ ಅವರು ಸ್ಪರ್ಧಿಸುತ್ತಾರೆ ಎಂದಾದರೆ ಭಾರತೀಯರ ಭಾರೀ ಬೆಂಬಲ ಸಿಗುವ ನಿರೀಕ್ಷೆ ಇದೆ.

ಅಮೆರಿಕಕ್ಕೆ ಮೊದಲ ಬಾರಿ ಹಿಂದೂ ಅಧ್ಯಕ್ಷೆ ಆಯ್ಕೆ?

loader