ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರ ಡೊನಾಲ್ಡ್‌. ಜೆ.ಟ್ರಂಪ್‌ ಅವರ ಈ ಹಿಂದಿನ ಭಾರತ ಪ್ರವಾಸಕ್ಕೆ ಅಮೆರಿಕದ ತೆರಿಗೆದಾರರು ನೀಡಿದ್ದ 72 ಲಕ್ಷ ರು. ವೆಚ್ಚ ಮಾಡಲಾಗಿದೆ. 

ಡೊನಾಲ್ಡ್‌ ಜೆ. ಟ್ರಂಪ್‌ರ ಭದ್ರತೆ ಸೇರಿದಂತೆ ಇತರ ವೆಚ್ಚಗಳಿಗೆ ಸುಮಾರು 1,00,000 ಅಮೆರಿಕನ್‌ ಡಾಲರ್‌(ಸುಮಾರು 72 ಲಕ್ಷ ರು.) ವೆಚ್ಚವಾಗಿದ್ದು, ಅದನ್ನು ಟ್ರಂಪ್‌ ಸರ್ಕಾರ ತೆರಿಗೆದಾರರ ಮೇಲೆ ಹಾಕಿದೆ. ಭಾರತದ ವಿವಿಧ ನಗರಗಳಲ್ಲಿ ಟ್ರಂಪ್‌ ಸಂಸ್ಥೆ ನಿರ್ಮಿಸುತ್ತಿರುವ ಕಂಪನಿಗಳಿಗೆ ಡೊನಾಲ್ಡ್‌ ಟ್ರಂಪ್‌ ಅವರು ಏಕ ಮಾತ್ರ ಮಾಲೀಕರಾಗಿದ್ದಾರೆ. 

ಟ್ರಂಪ್‌ ಜೆಆರ್‌ ಅವರು ಈ ಸಂಸ್ಥೆಯ ಉಪಾಧ್ಯಕ್ಷರಾಗಿದ್ದು, ಕಳೆದ ಫೆಬ್ರವರಿಯಲ್ಲಿ ದೆಹಲಿ, ಮುಂಬೈ, ಪುಣೆ ಮತ್ತು ಕೋಲ್ಕತ್ತಾ ಸೇರಿದಂತೆ ಭಾರತದ ಪ್ರವಾಸ ಕೈಗೊಂಡಿದ್ದರು. 

ಈ ವೇಳೆ ಹೋಟೆಲ್‌ ಕೊಠಡಿಗಳು, ವಿಮಾನ ವೆಚ್ಚ, ಬಾಡಿಗೆ ಕಾರು ಹಾಗೂ ಭದ್ರತೆಗೆ ಸೇರಿದಂತೆ ಒಟ್ಟು 97,805 ಡಾಲರ್‌ಗಿಂತ ಹೆಚ್ಚು ವೆಚ್ಚವಾಗಿದೆ. ಇದನ್ನು ಅಮೆರಿಕ ಸರ್ಕಾರವೇ ಭರಿಸಿದೆ ಎಂಬುದು ಅಮೆರಿಕ ಮಾತಿ ಸ್ವಾತಂತ್ರ್ಯ ಕಾಯ್ದೆಯಿಂದ ಬಯಲಾಗಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.