ಮನಾಲಿ[ಜು. 05] ಪ್ರವಾಸಕ್ಕೆಂದು ಹೋಗಿ ಅಲ್ಲಿ ಕಸ ಬಿಸಾಡಿ ಬರುತ್ತೇವೆ. ಹೌದು ಹಿಮಾಚಲ ಪ್ರದೇಶದ ಸುಂದರ ತಾಣ ಮನಾಲಿಯಲ್ಲಿ ಪ್ರತಿ ದಿನ 30 ರಿಂದ 40 ಟನ ತ್ಯಾಜ್ಯ ಮಾನವನಿಂದ ಎಸೆಯಲ್ಪಡುತ್ತದೆ. 

ಪೀಕ್ ಸೀಸನ್ ಅಂದರೆ ಮೇ ತಿಂಗಳಿನಿಂದ ಜೂನ್ ವರೆಗೆ  10 ಲಕ್ಷ ಪ್ರವಾಸಿಗರು ಸೌಂದರ್ಯ ಸದು ಹಿಂತಿರುಗುತ್ತಾರೆ. ಆದರೆ ತ್ಯಾಜ್ಯವನ್ನು ಅಲ್ಲಿಯೇ ಬಿಡುತ್ತಾರೆ. ಈ ಅವಧಿಯಲ್ಲಿ ಬರೋಬ್ಬರಿ 2000 ಟನ್ ಕಸ ಮನಾಲಿಯಲ್ಲಿ ಅನಾಥವಾಗಿ ಬಿದ್ದಿದೆ ಎಂದು ವರದಿಯಾಗಿದೆ.

ಇಷ್ಟು ದೊಡ್ಡ ಪ್ರಮಾಣದ ಕಸವನ್ನು ರೋಹ್ಟಂಗ್ ಪಾಸ್  ಮತ್ತು ಸೋಲಾಂಗ್  ಮತ್ತು ಸುತ್ತಮುತ್ತಲಿನ ಹೋಟೆಲ್ ಬಳಿ ಸಂಗ್ರಹಿಸಲಾಗಿದೆ ಅಂದರೆ ನಾವು ಮಾಲಿನ್ಯ ಮಾಡುತ್ತಿರುವ ಪ್ರಮಾಣ ಹೇಗಿದೆ ಯೋಚನೆ ಮಾಡಿ!

ಇದು ಕರ್ನಾಟಕದ್ದೇ ದೃಶ್ಯ,  ತಿಪ್ಪೆಯ ಆಹಾರ ತಿಂದ ಮಾನಸಿಕ ಅಸ್ವಸ್ಥ

ಪ್ಲಾಸ್ಟಿಕ್ ತ್ಯಾಜ್ಯದ್ದೇ ಇದರಲ್ಲಿ ದೊಡ್ಡ ಪಾಲು. ರಂಗರಿ ಮುನ್ಸಿಪಲ್ ಕಾರ್ಪೋರೇಶನ್ ಈ ಬಗ್ಗೆ ನಿರಂತರ ಕೆಲಸ  ಮಾಡುತ್ತಿದ್ದರೂ ಒಂದೆರಡು ದಿನದಲ್ಲಿ ಬದಲಾವಣೆ ಸಾಧ್ಯವಾಗುತ್ತಿಲ್ಲ.

ಮನಾಲಿ ಮಾತ್ರವಲ್ಲ ಪ್ರವಾಸಿಗರು ಭೇಟಿ ನೀಡುವ ಪರಿಣಾಮ ಇಡೀ ಜಿಲ್ಲೆ ತ್ಯಾಜ್ಯದ ಸಮಸ್ಯೆ ಎದುರಿಸುತ್ತಿದೆ. ಪೌರಾಡಳಿತ ಕಸ ವಿಲೇವಾರಿಗೆ ಕ್ರಮ ತೆಗೆದುಕೊಳ್ಳುತ್ತಿದ್ದರೂ ಜನರು ಸಹ ಪರಿಸರ ಕಾಪಾಡುವ ದೊಡ್ಡ ಮನಸ್ಸನ್ನು ತಾವೇ ಬೆಳೆಸಿಕೊಳ್ಳಬೇಕಿದೆ.