ಚಿಕ್ಕಮಗಳೂರು ಪ್ರವಾಸ ಹೊರಡುವ ಮುಂಚೆ ಈ ಸ್ಟೋರಿ ಓದಿ
ದತ್ತಾತ್ರೇಯ ಪೀಠ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ. ನೀವೇನಾದರೂ ಚಿಕ್ಕಮಗಳೂರಿನ ನಿಸರ್ಗ ಸೌಂದರ್ಯ ಸವಿಯಬೇಕು ಅಂತಿದ್ದರೆ ಡಿಸೆಂಬರ್ 22ರ ಬಳಿಕ ಟ್ರಿಪ್ ಹೋಗೋದು ಒಳ್ಳೇದು.
ಚಿಕ್ಕಮಗಳೂರು[ಡಿ.0] ವಿವಾದಿತ ಇನಾ ದತ್ತಾತ್ರೇಯ ಪೀಠದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ಆಯೋಜಿಸಿರುವ ದತ್ತ ಜಯಂತಿಯ ಹಿನ್ನಲೆಯಲ್ಲಿ, ಕಾಫಿನಾಡಿಗೆ ಭೇಟಿಕೊಡುವ ಪ್ರವಾಸಿಗರಿಗೆ ಇಂದಿನಿಂದ ಮೂರು ದಿನಗಳ ಕಾಲ ನಿರ್ಬಂಧ ಹೇರಿದೆ.
ಮುಳ್ಳಯ್ಯನಗಿರಿ, ದತ್ತಾತ್ರೇಯ ಪೀಠ ಸೇರಿದಂತೆ ಗಿರಿ ಶ್ರೇಣಿ ಪ್ರದೇಶಗಳಿಗೆ ಡಿಸೆಂಬರ್ 20,21 ಹಾಗೂ 22ರಂದು ಭೇಟಿ ಕೊಡುವ ಪ್ರವಾಸಿಗರಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಲಕ್ಷಾಂತರ ಸಂಖ್ಯೆಯಲ್ಲಿ ದತ್ತಾತ್ರೇಯ ಪೀಠಕ್ಕೆ ದತ್ತ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನಚ್ಚೆರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ತೀರ್ಮಾನಕ್ಕೆ ಬಂದಿದೆ.
ದತ್ತಾತ್ರೇಯ ಪೀಠ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ. ನೀವೇನಾದರೂ ಚಿಕ್ಕಮಗಳೂರಿನ ನಿಸರ್ಗ ಸೌಂದರ್ಯ ಸವಿಯಬೇಕು ಅಂತಿದ್ದರೆ ಡಿಸೆಂಬರ್ 22ರ ಬಳಿಕ ಟ್ರಿಪ್ ಹೋಗೋದು ಒಳ್ಳೇದು.