Asianet Suvarna News Asianet Suvarna News

ಪಾಕ್ ಬಣ್ಣ ಬಯಲು, 7 ಶಾಸಕರು ಅಮಾನತು: ಇಲ್ಲಿದೆ ಅ. 29ರ ಟಾಪ್ 10 ನ್ಯೂಸ್!

ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿರುವುದು ಜನರಿಗೆ ಕೊಂಚ ನೆಮ್ಮದಿ ಕೊಟ್ಟಿದೆ. ಹೀಗಿರುವಾಗಲೇ ಅತ್ತ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಂಧನದ ವೇಳೆ ಪಾಕಿಸ್ತಾನದ ಪರಿಸ್ಥಿತಿಯನ್ನು ಅಲ್ಲಿನ ಸಂಸದರೊಬ್ಬರು  ವಿವರಿಸಿದ್ದಾರೆ. ಇನ್ನು ಇತ್ತ ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಇಷ್ಟೇ ಅಲ್ಲದೇ ಇಂದು ಗುರುವಾಗ 29ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ. 

Top 10 News of 29 October 2020
Author
Bangalore, First Published Oct 29, 2020, 5:20 PM IST

ಪ್ಲೀಸ್ ಅಭಿನಂದನ್ ಬಿಟ್ಟುಬಿಡಿ, ಇಲ್ಲದಿದ್ರೆ ಭಾರತ ದಾಳಿ ಮಾಡುತ್ತೆ: ಪಾಕ್‌ ರಹಸ್ಯ ಬಿಚ್ಚಿಟ್ಟ ಸಂಸದ!
Top 10 News of 29 October 2020
ಪಾಕಿಸ್ತಾನದ ಸಂಸದನೊಬ್ಬ ಬುಧವಾರದಂದು ಮಾತನಾಡುತ್ತಾ ಇಮ್ರಾನ್ ಖಾನ್ ಸರ್ಕಾರ ಭಾರತ ದಾಳಿ ನಡೆಸುತ್ತದೆ ಎಂಬ ಭಯದಿಂದ ವಿಂಗ್ ಕಮಾಂಡರ್ ಅಭಿನಂದನ್‌ ವರ್ಧಮಾನ್‌ರನ್ನು ಬಿಡುಗಡೆಗೊಳಿಸಿದ್ದರೆಂದು ತಿಳಿಸಿದ್ದಾರೆ. ಸಂಸದ ಈ ವಿಚಾರವನ್ನು ಅಲ್ಲಿನ ಸಂಸತ್ತಿನಲ್ಲೇ ಬಹಿರಂಗಪಡಿಸಿದ್ದಾರೆಂಬುವುದು ಉಲ್ಲೇಖನೀಯ.

7 ಶಾಸಕರು ಪಕ್ಷದಿಂದ ಅಮಾನತು: ಯಾರ‍್ಯಾರು..?
Top 10 News of 29 October 2020
 ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ ಮರು ದಿನವೇ ಬಹುಜನ ಸಮಾಜವಾದಿ ಪಕ್ಷದ 7 ಶಾಸಕರನ್ನು  ಪಕ್ಷದಿಂದ ಅಮಾನತು ಮಾಡಿದ ಅಧ್ಯಕ್ಷೆ ಮಾಯಾವತಿ ಆದೇಶ ಹೊರಡಿಸಿದ್ದಾರೆ.

ಸಿಎಂ ಆಗಿದ್ದಾಗ ಬಹಿರಂಗವಾಗಿ ಅತ್ತಿದ್ಯಾಕೆ? ಅಂದಿನ ಕಣ್ಣೀರಿನ ಕಥೆ ಹೇಳಿದ ಎಚ್‌ಡಿಕೆ
Top 10 News of 29 October 2020
ಕಾಂಗ್ರೆಸ್ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭವೇ ಹೊರತು ಜನರ ಕಲ್ಯಾಣವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

BJPಅಣ್ಣನಿಗೆ ತಂಗಿ ಸವಾಲ್ - ನೀನು 4 ಬಂಗಾರದ ಬಳೆ ಮಾಡಿಸಬೇಕು : ಲಕ್ಷ್ಮೀ ಹೆಬ್ಬಾಳ್ಕರ್
Top 10 News of 29 October 2020
ಬರುವ ದಿನಗಳಲ್ಲಿ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಆದರೆ, ಅವರು ಕೊಡಲಿಲ್ಲ ಅಂದರೆ ಮುಂದಿನ ಕಾಂಗ್ರೆಸ್‌ ಸರ್ಕಾರ ಬರುತ್ತೆ. ನಾವು ಆಗ ಮೀಸಲಾತಿ ನೀಡಿಯೇ ನೀಡ್ತೀವಿ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮೇ ಹೆಬ್ಬಾಳಕರ್‌ ಅವರು ಬಿಜೆಪಿ ಶಾಸಕ ಮುರುಗೇಶ ನಿರಾಣಿ ಅವರಿಗೆ ಸವಾಲೆಸೆದರು.

ಶಿಕ್ಷಕನ ಶಿರಚ್ಛೇದ ಮಾಡಿದ ಮುಸ್ಲಿಂ ಬಾಲಕ: ಫ್ರೆಂಚ್ ಅಧ್ಯಕ್ಷರ ಬೆಂಬಲಕ್ಕೆ ನಿಂತ ಭಾರತ
Top 10 News of 29 October 2020
ಭಾರತ ಮತ್ತು ಫ್ರಾನ್ಸ್ ಗೆಳೆತನಕ್ಕೆ ಸಾಕ್ಷಿಯಾಗುವಂತ ಬೆಳವಣಿಗೆಯೊಂದು ಇತ್ತೀಚೆಗೆ ನಡೆದಿದೆ. ಟರ್ಕಿ ಅಧ್ಯಕ್ಷ ರೆಸೆಪ್ ಟೈಯಿಪ್ ಎರ್ಡೊಗಾನ್ ಫ್ರೆಂಚ್ ಅಧ್ಯಕ್ಷ ಇಮಾನ್ಯೂಲ್ ಮಾರ್ಕೊನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಸಂದರ್ಭ ಭಾರತ ಮಾಕ್ರೋನ್ ಬೆಂಬಲಕ್ಕೆ ನಿಂತಿದೆ.

ಕೊರೋನಾ ಸಾವು ಇರದ ಏಕೈಕ ರಾಜ್ಯದಲ್ಲಿ ಪ್ರಥಮ ವ್ಯಕ್ತಿ ಬಲಿ!
Top 10 News of 29 October 2020
ಕೊರೋನಾದಿಂದ ಈವರೆಗೆ ಒಂದೇ ಒಂದು ಸಾವು ಕೂಡ ಸಂಭವಿಸಿರದ ರಾಜ್ಯ ಎನಿಸಿಕೊಂಡಿದ್ದ ಮಿಜೋರಂನಲ್ಲಿ ಕೊರೋನಾಕ್ಕೆ ಮೊದಲ ಬಲಿ ಆಗಿದ್ದು, 62 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಸಾವು ಸಂಭವಿಸಿದಂತಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಕೊರೋನಾ ಸಾವು ಸಂಭವಿಸಿಲ್ಲ.

ತಮ್ಮ ದೇಶದ ಪರ ಆಡಲು ಸೂರ್ಯಕುಮಾರ್‌ ಯಾದವ್‌ಗೆ ಆಹ್ವಾನ ಕೊಟ್ಟ ಕಿವೀಸ್ ಮಾಜಿ ಆಟಗಾರ
Top 10 News of 29 October 2020
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಬಹುತೇಕ ತನ್ನ ಪ್ಲೇ ಆಫ್ ಸ್ಥಾನವನ್ನು ರೋಹಿತ್ ಶರ್ಮಾ ಪಡೆ ಖಚಿತ ಪಡಿಸಿಕೊಂಡಿದೆ. ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಸೂರ್ಯಕುಮಾರ್ ಯಾದವ್ ಅಜೇಯ ಬ್ಯಾಟಿಂಗ್ ನೆರವಿನಿಂದ ಮುಂಬೈ ಭರ್ಜರಿ ಗೆಲುವು ದಾಖಲಿದೆ. ಕಳೆದ ಕೆಲವು ವರ್ಷಗಳಿಂದ ಅದ್ಭುತ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿಲ್ಲ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಮಾಜಿ ಸ್ಟಾರ್ ಆಟಗಾರ ತಮ್ಮ ದೇಶದ ಪರ ಆಡಲು ಮುಕ್ತ ಆಹ್ವಾನ ನೀಡಿದ್ದಾರೆ.

IAS ಅಧಿಕಾರಿಯಾದ ಅಪ್ಪಟ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್!
Top 10 News of 29 October 2020
ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ನಟಿ ಶ್ರದ್ಧಾ ಶ್ರೀನಾಥ್‌ ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಆಯ್ಕೆ ಮಾಡಿರದಂತ ವಿಭಿನ್ನ ಪಾತ್ರಕ್ಕೆ ಸೈ ಎಂದಿದ್ದಾರೆ. ಅದುವೇ ಐಎಎಸ್‌ ಅಧಿಕಾರಿಯಾಗಿ ಎನ್ನಲಾಗಿದೆ. 

65ರ ಹರೆಯದಲ್ಲಿ ವಕೀಲ ಸಾಳ್ವೆ ಸೆಕೆಂಡ್ ಇನ್ನಿಂಗ್ಸ್: ಲಂಡನ್​ನ‌ ಕಲಾವಿದೆ ಕ್ಯಾರೋಲಿನ್ ಜೊತೆ ವಿವಾಹ!
Top 10 News of 29 October 2020
ಹಿರಿಯ ವಕೀಲ ಹರೀಶ್ ಸಾಳ್ವೆ ವೈವಾಹಿಕ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಪತ್ನಿಗೆ ಜೂನ್‌ನಲ್ಲಿ ವಿಚ್ಛೇದನ ನೀಡಿದ್ದ ಸಾಳ್ವೆ ಲಂಡನ್​ನ‌ ಕಲಾವಿದೆ ಜೊತೆ ವಿವಾಹವಾಗಿದ್ದಾರೆ. ಇಲ್ಲಿದೆ ನೋಡಿ ವಿವಾಹ ಸಮಾರಂಭದ ಚಿತ್ರಗಳು.

2.4 ಕೋಟಿ ರೂಪಾಯಿ ಕಾರು ಸುಟ್ಟು ಯುಟ್ಯೂಬ್‌ಗೆ ಅಪ್‌ಲೋಡ್‌!
Top 10 News of 29 October 2020
ರಷ್ಯಾದ ಯೂಟ್ಯೂಬರ್‌ ಒಬ್ಬ ಪದೇ ಪದೇ ಕೆಟ್ಟು ನಿಲ್ಲುತ್ತಿದ್ದ ಮರ್ಸಿಡಿಸ್‌ ಕಾರಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಲ್ಲದೇ, ಆ ವಿಡಿಯೋವನ್ನೇ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.

Follow Us:
Download App:
  • android
  • ios