ಬಿಜೆಪಿಯಲ್ಲಿ ಭಾರೀ ಬದಲಾವಣೆ; ಕೇಸರಿ ಯುವಪಡೆಗೆ ಕನ್ನಡಿಗನ ಹೊಣೆ!

ರಾಷ್ಟ್ರ ಬಿಜೆಪಿಯಲ್ಲಿ ಭಾರೀ ಬದಲಾವಣೆ ಕಾಣಿಸುತ್ತಿದೆ. ಕರ್ನಾಟಕದ ಬಿಜೆಪಿ ಪಾಲಿಗೆ ಈ ಬದಲಾವಣೆ ಭಾರೀ ಸಂತಸವನ್ನು ತಂದಿದೆ. ಪಕ್ಷದ ಸಂಘಟನೆಯಲ್ಲಿ ಮುಂದಿನ ತಲೆಮಾರಿನವರಿಗೆ ಮತ್ತು ಯುವಕರಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. 

ಸರ್ಕಾರ ನಮ್ಮ ಜೊತೆ ಚರ್ಚೆ ನಡೆಸಿಲ್ಲ, ನಮಗೆ ಈ ಕಾಯ್ದೆ ಬೇಡ : ರೈತ ಮಹಿಳೆ

ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ತರಲು ಹೊರಟಿರುವ ಸರ್ಕಾರದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೂ ಕೂಡಾ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

ಜೈಲುವಾಸ ಮುಕ್ತಿ ಆಸೆಯಲ್ಲಿದ್ದ ನಟಿಮಣಿಯರಿಗೆ ಬಿಗ್ ಶಾಕ್!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೃಇರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ನಟಿಮಣಿಯರಿಗೆ ಜೈಲು ವಾಸ ಮುಂದುವರಿಯಲಿದೆ.

RBI,ಸರ್ಕಾರಿ ಬ್ಯಾಂಕ್, LIC ಉದ್ಯೋಗಿಗಳ ವೇತನದಿಂದ ಪಿಎಂ ಕೇರ್ಸ್‌ಗೆ 200 ಕೋಟಿ ರೂ.!

ಕೊರೋನಾತಂಕ ನಡುವೆ ತುರ್ತು ಪರಿಸ್ಥಿತಿಗೆಂದು ನಿರ್ಮಿಸಲಾಗಿದ್ದ ಪಿಎಂ ಕೇರ್ಸ್‌ ನಿಧಿಗೆ ಭಾರತೀಯ ರಿಸರ್ವ್‌ ಬ್ಯಾಂಕ್, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ 
ಪ್ರಮುಖ ಹಣಕಾಸು ಸಂಸ್ಥೆಗಳು ಸುಮಾರು 200 ಕೋಟಿ ರೂ. ದೇಣಿಗೆ ನೀಡಿವೆ ಎಂದು ವರದಿಗಳು ಬಹಿರಂಗಪಡಿಸಿವೆ.

ಲತಾ ಮಂಗೇಶ್ಕರ್‌ಗೆ ವಿಷ ನೀಡಲಾಗಿತ್ತು! ಇಂದು ದೀದಿಯ 90ನೇ ಜನ್ಮದಿನ

ಲತಾ ಮಂಗೇಶ್ಕರ್ ಲೋಕವೇ ಬಲ್ಲ ಹೆಸರು. ಐವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಮುಖ್ಯವಾಗಿ ಹಿಂದಿಯಲ್ಲಿ, ಭಾರತದ ಇತರ ಭಾಷೆಗಳಲ್ಲೂ ಹಾಡಿದ್ದಾರೆ. ಅವರ ಹಾಡುಗಳು ಇಂದು ಭಾರತದ ಎಲ್ಲ ಗಾಯಕರಿಗೂ ಗಾಯಕಿಯರಿಗೂ ಸ್ಫೂರ್ತಿ. ಈಕೆ ಲಿವಿಂಗ್‌ ಲೆಜೆಂಡ್. ಈಗಲೂ ಹಾಡಬಲ್ಲರು. ಅವರ ಧ್ವನಿಯಲ್ಲಿ ಮೊದಲಿನ ಮಾಧುರ್ಯ ಉಳಿದಿಲ್ಲವಾದರೂ ಈಗಲೂ ಕೇಳಿದರೆ ಹಾಡಬಲ್ಲರು. ಯೌವನದ ಕಾಲದಲ್ಲಿ ಅವರು ಇಲ್ಲದೆ ಹಿಂದಿಯ ಚಿತ್ರಗಳೇ ಇರುತ್ತಿರಲಿಲ್ಲ. ಈಕೆಯ ಧ್ವನಿಯಿಂದಲೇ ಚಲನಚಿತ್ರಗಳು ಪಾಪ್ಯುಲರ್ ಆಗುತ್ತಿದ್ದವು. 

ಜೈಲಿನಲ್ಲಿದ್ದರೂ ಸ್ವತಂತ್ರರಾಗಿದ್ದರು ಭಗತ್ ಸಿಂಗ್, ನಗುತ್ತಲೇ ಗಲ್ಲಿಗೇರಿದ್ದರು!

 ಜೀವನವೆಂಬುವುದು ದೀರ್ಘವಾಗಿರಬೇಕಿಲ್ಲ, ಆದರೆ ದೊಡ್ಡದಾಗಿರಬೇಕು. ಇದನ್ಉ ಯಾರೆಲ್ಲಾ ಅಳವಡಿಸಿಕೊಂಡು ಬದುಕಿದರೋ ಅವರೆಲ್ಲರೂ ಇಂದು ಅಮರರಾಗಿದ್ದಾರೆ. ಇದೇ ರೀತಿ ಬದುಕಿದವರಲ್ಲಿ ಶಹೀದ್-ಎ-ಆಜಂ ಭಗತ್ ಸಿಂಗ್ ಕೂಡಾ ಒಬ್ಬರು. ಭಗತ್ ಸಿಂಗ್ 28 ಸೆಪ್ಟೆಂಬರ್ 1907 ದು ಜನಿಸಿದ ಭಾರತ ಮಾತೆಯ ಸುಪುತ್ರ 1931ರ ಮಾರ್ಚ್ 23 ರಂದು ನಗು ನಗುತ್ತಲೇ ಗಲ್ಲಿಗೇರಿದ್ದರು. ಅದಮ್ಯ ಸಾಹಸದಿಂದ ಬ್ರಿಟಿಷರನ್ನು ನಡುಗುವಂತೆ ಮಾಡಿದ್ದ ಭಗತ್ ಸಿಂಗ್ ರಕ್ತದ ಕಣ ಕಣದಲ್ಲೂ ದೇಶಭಕ್ತಿ ಹಾಗೂ ಕ್ರಾಂತಿಯ ಕಿಚ್ಚಿತ್ತು. ಹೀಗಾಗೇ ಅವರು 'ಬೂದಿಯ ಪ್ರತಿಯೊಂದು ಕಣವೂ ನನ್ನ ಶಾಖದಿಂದ ಚಲಿಸುತ್ತಿದೆ. ಹೀಗಾಗೇ ಜೈಲಿನಲ್ಲಿಯೂ ಸ್ವತಂತ್ರನಾಗಿರುವ ಒಬ್ಬ ಹುಚ್ಚ ನಾನು' ಎನ್ನುತ್ತಿದ್ದರು.

ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ ಸಿದ್ದರಾಮಯ್ಯ..!

ಯಡಿಯೂರಪ್ಪ ಒಬ್ಬ ಡೋಂಗಿ ರೈತ ನಾಯಕ. ಹಸಿರು ಶಾಲು ಹಾಕಿಕೊಂಡು ಬಿಂಬಿಸಿದ್ದರು. ನಿಜವಾಗಲೂ ರೈತರ ಪರ ಇದ್ದಿದ್ದರೆ ಇಂತಹ ಕಾಯ್ದೆ ತರುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಿಎಸ್​ವೈ ವಿರುದ್ಧ ಗುಡುಗಿದ್ದಾರೆ.

ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

 ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್  113 ನೇ ಜನ್ಮ ದಿನಾಚರಣೆಯ ಸಂದರ್ಭ ನಟಿ ಕಂಗನಾ ರಣಾವತ್ ಗೌರವ ಸಲ್ಲಿಕೆ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಂದು ವಾರದ ಪ್ರದರ್ಶನ ಹೇಗಿತ್ತು..?

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಒಂದು ವಾರ ಕಳೆದಿದೆ. ಈ ಒಂದು ವಾರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಗೆಲುವು ಮತ್ತೊಂದರಲ್ಲಿ ಸೋಲು ಕಂಡಿದೆ.

18 ತಿಂಗಳಲ್ಲಿ ಗುಡ್ಡ ಕೊರೆದು ಊರಿಗೆ ನೀರು ಹರಿಸಿದ 250 ಭಗೀರಥೆಯರು!

ಬಿಹಾರದ ಲೌಂಗಿ ಬುಹಿಯಾನ್‌ ಎಂಬ ಬಡ ರೈತ 30 ವರ್ಷಗಳ ಕಾಲ ಏಕಾಂಗಿಯಾಗಿ 3 ಕಿ.ಮೀ ಕಾಲುವೆ ತೋಡಿ ಕರೆಗೆ ನೀರು ಹರಿಸಿದ ಪ್ರೇರಣಾದಾಯಕ ಸುದ್ದಿಯ ಬೆನ್ನಲ್ಲೇ, 250 ಮಹಿಳೆಯರು ಸತತ 18 ತಿಂಗಳ ಗುಡ್ಡ ಕೊರೆದು ಗ್ರಾಮಕ್ಕೆ ನೀರು ಹರಿಸಿದ ಸುದ್ದಿಯೊಂದು ಮಧ್ಯಪ್ರದೇಶದಿಂದ ವರದಿಯಾಗಿದೆ.