Asianet Suvarna News Asianet Suvarna News

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗದಿಂದ ಹೊಸ ತಂತ್ರ..!

ಛತ್ತೀಸ್‌ಗಢ ರಾಜ್ಯ ಚುನಾವಣಾ ಆಯೋಗವು ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಮಾವೋವಾದಿಗಳು ಮತದಾರರ ಬೆರಳ ಮಸಿಯನ್ನು ಗಮನಿಸಿ ಅವರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮತ ಹಾಕಿದ ಕೆಲವೇ ದಿನಗಳಲ್ಲಿ ಅಳಿಸಬಹುದಾದ ಶಾಯಿಯನ್ನು ನಕ್ಸಲ್‌ಪೀಡಿತ ಭಾಗಗಳಲ್ಲಿ ಹಚ್ಚಲು ಅವಕಾಶ ಕೊಡಿ ಎಂದು ಅದು ಮನವಿಯಲ್ಲಿ ಹೇಳಿದೆ. ಹೀಗಾಗಿ ಕೆಲವು ದಿನಗಳಲ್ಲಿ ಅಳಿಸಿ ಹೋಗಬಹುದಾದ ‘ಸೆಮಿ-ಪರ್ಮನಂಟ್’ ಶಾಯಿಯನ್ನು ಮತದಾರರ ಎಡಗೈ ತೋರುಬೆರಳಿಗೆ ಹಚ್ಚುವ ಪ್ರಸ್ತಾಪವಿದೆ.

To encourage tribals to vote EC devises new approach in naxal hit CG
Author
Chhattisgarh, First Published Oct 15, 2018, 10:02 AM IST
  • Facebook
  • Twitter
  • Whatsapp

ನವದೆಹಲಿ/ರಾಯ್‌ಪುರ: ಛತ್ತೀಸ್‌ಗಢದ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಮತದಾರರನ್ನು ಮಾವೋವಾದಿಗಳಿಂದ ರಕ್ಷಿಸಲು ಚುನಾವಣಾ ಆಯೋಗವು ವಿನೂತನ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯ ಬದಲು ಕೆಲವೇ ದಿನಗಳಲ್ಲಿ ಅಳಿಸಬಹುದಾದ ಶಾಯಿ ಬಳಸಲು ಅದು ಯೋಚಿಸುತ್ತಿದೆ.

ಛತ್ತೀಸ್‌ಗಢ ರಾಜ್ಯ ಚುನಾವಣಾ ಆಯೋಗವು ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಮಾವೋವಾದಿಗಳು ಮತದಾರರ ಬೆರಳ ಮಸಿಯನ್ನು ಗಮನಿಸಿ ಅವರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮತ ಹಾಕಿದ ಕೆಲವೇ ದಿನಗಳಲ್ಲಿ ಅಳಿಸಬಹುದಾದ ಶಾಯಿಯನ್ನು ನಕ್ಸಲ್‌ಪೀಡಿತ ಭಾಗಗಳಲ್ಲಿ ಹಚ್ಚಲು ಅವಕಾಶ ಕೊಡಿ ಎಂದು ಅದು ಮನವಿಯಲ್ಲಿ ಹೇಳಿದೆ. ಹೀಗಾಗಿ ಕೆಲವು ದಿನಗಳಲ್ಲಿ ಅಳಿಸಿ ಹೋಗಬಹುದಾದ ‘ಸೆಮಿ-ಪರ್ಮನಂಟ್’ ಶಾಯಿಯನ್ನು ಮತದಾರರ ಎಡಗೈ ತೋರುಬೆರಳಿಗೆ ಹಚ್ಚುವ ಪ್ರಸ್ತಾಪವಿದೆ. ಕೆಲವು ದಿನ ಕಾಲ ಈ ಮಸಿ ಇರಲಿದ್ದು, ಅಳಿಸಿ ಹೋಗಲಿದೆ. ಅಳಿಸಲಾಗದ ಶಾಯಿಯಿಂತೆ ಹಲವು ತಿಂಗಳು ಕಾಲ ಇರುವುದಿಲ್ಲ ಎಂದಿದ್ದಾರೆ.

2013 ಹಾಗೂ 2014ರ ಚುನಾವಣೆಗಳಲ್ಲೂ ಇದೇ ಕೋರಿಕೆ ಸಲ್ಲಿಸಲಾಗಿತ್ತಾದರೂ, ಅದಕ್ಕೆ ಕೇಂದ್ರ ಆಯೋಗದ ಮನ್ನಣೆ ಸಿಕ್ಕಿರಲಿಲ್ಲ. ಛತ್ತೀಸ್‌ಗಢದಲ್ಲಿ 14 ನಕ್ಸಲ್‌ಪೀಡಿತ ಸೂಕ್ಷ್ಮ ಪ್ರದೇಶಗಳಿವೆ.

Follow Us:
Download App:
  • android
  • ios