ಕೋಲ್ಕತ್ತಾ [ನ. 18]  ಸಂಸತ್ ನಲ್ಲಿಯೇ ಸಂಚಲನ ಮೂಡಿಸಿದ್ದ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಉಸಿರಾಟದ ತೊಂದಯಿಂದ ಕೋಲ್ಕತ್ತಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಟಿಎಂಸಿ ಪಕ್ಷದಿಂದ ಬಸಿರ್‌ಹತ್‌ನಿಂದ ಲೋಕಸಭೆಗೆ ಆಯ್ಕೆಯಾದ ಜಹಾನ್ ಅವರನ್ನು ಕಳೆದ ಭಾನುವಾರ ರಾತ್ರಿ 9.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯಿಂದಾಗಿ ನುಸ್ರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ಆಸ್ತಮಾ ಸಮಸ್ಯೆ ಇದೆ ಎಂದು ಕುಟುಂಬದ ಮೂಲಗಳು ಹೇಳಿದ್ದವು.

ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮುಖೇನ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ನಾನು ನನ್ನ ಕ್ಷೇತ್ರಕ್ಕೆರ ಭೇಟಿ ನೀಡಿ ಕೆಲಸ ಮುಂದುವರಿಸುತ್ತೇನೆ. ದೆಹಲಿಗೆ ತೆರಳಿ ಅಧಿವೇಶನದಲ್ಲಿ ಭಾಗವಹಿಸಲಿದ್ದೇನೆ ಎಂದು ಹೇಳಿದ್ದಾರೆ.

ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?

ನುಸ್ರತ್ ಜಹಾನ್ ಬಂಗಾಳದಲ್ಲಿ ಪ್ರಸಿದ್ಧವಾದ ನಟಿ. ಟಿಎಂಸಿ ಟಿಕೆಟ್ ಪಡೆದು, ಬಸಿರ್ ಹತ್ ಲೋಕಸಭಾ ಕ್ಷೇತ್ರದಿಂದ ಗೆದ್ದ ಈ ನಟಿ ಸಂಸತ್ ಮುಂದೆ ವಿದೇಶಿ ಉಡುಗೆ ತೊಟ್ಟು ತೆಗೆಸಿಕೊಂಡ ಫೋಟೋದಿಂದ ಟ್ರೋಲ್ ಆಗಿದ್ದರು. TMCಯ ಮತ್ತೊಬ್ಬ ಸಂಸದೆ ಮಿಮಿ ಚಕ್ರವರ್ತಿ ಸಹ ಸೌಂದರ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತೆ ಇದ್ದಾರೆ.

ಸಂಸತ್ತಿನೆದುರು ಪಾಶ್ಚಾತ್ಯ ಉಡುಗೆ ತೊಟ್ಟು ಪೋಸ್: ಸಂಸದೆಯರು ಟ್ರೋಲ್!

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ಈ ನಟಿ ಕಮ್ ಸಂಸದೆ  ತಮ್ಮ ಲವ್ ಲೈಫ್ ಬಗ್ಗೆಯೂ ರಿವೀಲ್ ಮಾಡಿದ್ದಾರೆ. ತಮ್ಮ ಮದುವೆ ಬಗ್ಗೆಯೂ ಹೇಳಿಕೊಂಡಿದ್ದು, ಈ ವಿಚಾರವಾಗಿ ಹುಟ್ಟಿಕೊಂಡ ಗಾಸಿಪ್‌ಗಳಿಗೆ ಅಂತ್ಯ ಹಾಡಿದ್ದರು.