Asianet Suvarna News Asianet Suvarna News

2 ರಾಜ್ಯಕ್ಕೆ ಭೀಕರ ಚಂಡಮಾರುತ ಭೀತಿ : ಭಾರೀ ಮಳೆ ಸಾಧ್ಯತೆ

ವಾಯುಭಾರ ಕುಸಿತ ಚಂಡಮಾರುತವಾಗಿ ಪರಿಚರ್ತನೆಯಾಗಿದ್ದು ಇದರಿಂದ ಎರಡು ರಾಜ್ಯಗಳಾದ ಒಡಿಶಾ ಹಾಗೂ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. 

Titli Storm May Hit Odisha And Coastal Andhra Pradesh
Author
Bengaluru, First Published Oct 10, 2018, 11:36 AM IST
  • Facebook
  • Twitter
  • Whatsapp

ಭುವನೇಶ್ವರ್‌: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಮಂಗಳವಾರ ಬೆಳಗ್ಗೆ ಉಂಟಾದ ಭಾರೀ ವಾಯುಭಾರ ಕುಸಿತ, ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ಗುರುವಾರದೊಳಗೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. 

ಈ ಬಾರಿಯ ಚಂಡಮಾರುತಕ್ಕೆ ಪಾಕಿಸ್ತಾನವು ತಿತ್ಲಿ (ಚಿಟ್ಟೆ) ಎಂದು ಹೆಸರಿಟ್ಟಿದ್ದು, ತಿತ್ಲಿ ಪರಿಣಾಮ ಎರಡು ರಾಜ್ಯಗಳಲ್ಲಿಯೂ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಸಿದೆ.

ಹವಾಮಾನ ಇಲಾಖೆಯು ಒಡಿಶಾದಲ್ಲಿ ಮಂಗಳವಾರ ಮತ್ತು ಬುಧವಾರಕ್ಕೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದ್ದು, ಭಾರೀಯಿಂದ ಅತಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ. 

ಆರಂಭದಲ್ಲಿ ಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಬಳಿಕ 100 ಕಿ.ಮೀವರೆಗೂ ವೇಗಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Follow Us:
Download App:
  • android
  • ios