Asianet Suvarna News Asianet Suvarna News

ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲು?

ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆಯಾಗುವ ಸಾಧ್ಯತೆ ಇದೆ.  ‘ಚಾಮರಾಜ ಒಡೆಯರ್‌’ ಹೆಸರಿಡುವ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ  ಆಶ್ವಾಸನೆ ನೀಡಿದ್ದಾರೆ

Tippu Express Train Name May Change
Author
Bengaluru, First Published Oct 31, 2018, 8:51 AM IST

ಬೆಂಗಳೂರು :  ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಿಸಿ ‘ಚಾಮರಾಜ ಒಡೆಯರ್‌’ ಹೆಸರಿಡುವ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಆಶ್ವಾಸನೆ ನೀಡಿದ್ದಾರೆ. 

ಟಿಪ್ಪು ಜಯಂತಿ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮುಖಂಡರೊಬ್ಬರಿಂದ ಬಂದಿರುವ ಹೇಳಿಕೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

ಫೌಂಡೇಷನ್‌ ಫಾರ್‌ ಇಂಡಿಕ್‌ ರಿಸಚ್‌ರ್‍ ಸ್ಟಡೀಸ್‌ ವತಿಯಿಂದ ನಗರದ ಮಿಥಿಕ್‌ ಸೊಸೈಟಿಯಲ್ಲಿ ಆಯೋಜಿಸಿದ್ದ ‘ಟಿಪ್ಪು ಜಯಂತಿ- ಸಮಾಜ ವಿಭಜನೆ ಸಂಚು’ ಕುರಿತ ವಿಚಾರ ಸಂಕಿರಣದಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಈ ಭರವಸೆ ನೀಡಿದರು.

ಇದೇ ವೇಳೆ ಟಿಪ್ಪು ಎಕ್ಸ್‌ಪ್ರೆಸ್‌ ಬದಲು ಚಾಮರಾಜ ಒಡೆಯರ್‌ ಹೆಸರನ್ನು ರೈಲಿಗೆ ಇಡುವಂತೆ ಮನವಿ ಮಾಡಲಾಯಿತು. ಈ ಸಲಹೆ ಉತ್ತಮವಾಗಿದ್ದು, ಈ ಬಗ್ಗೆ ರೈಲ್ವೆ ಸಚಿವರ ಜತೆ ಸಮಾಲೋಚನೆ ನಡೆಸಲಾಗುವುದು ಎಂದರು. ಇದೇ ವೇಳೆ ಟಿಪ್ಪು ಹಿಂದು ವಿರೋಧಿ ಎಂದು ತ್ರಿವೇದಿ ಕಿಡಿಕಾರಿದರು.

Follow Us:
Download App:
  • android
  • ios