3 ವರ್ಷದ ಬಾಲಕಿ ಶವ ಪತ್ತೆ-ಅತ್ಯಾಚರ ಎಸಗಿರುವ ಶಂಕೆ

Three-year-old girl’s body found at a field in Bihar, police suspect rape
Highlights

3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬಿಹಾರ್‌ದ ಸಂಸ್ಥಿಪುರ್ ಜಿಲ್ಲೆಯ ಪಾರ್ ಗ್ರಾಮದಲ್ಲಿ ನಡೆದಿದೆ. ಆರೋಪಿ ಪತ್ತೆಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ.

ಬಿಹಾರ(ಜೂನ್.3): ದೇಶದಲ್ಲೀಗ ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಿಂದ ಕಾಣೆಯಾಗಿದ್ದ ಬಿಹಾರದ ಪಾರ್ ಗ್ರಾಮದ 3 ವರ್ಷದ ಬಾಲಕಿ ಇದೀಗ ಶವವಾಗಿ ಪತ್ತೆಯಾಗಿದೆ.  ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸಂಸ್ಥಿಪುರ್ ಜಿಲ್ಲೆಯ ಪಾರ್ ಗ್ರಾಮದ ಬಾಲಕಿ ಜೂನ್.2 ರಂದು ತಾಯಿ ಜೊತೆ ಕುರಿ ಮೇಯಿಸಲು ತೆರಳಿದ್ದಾರೆ. ಇದೇ ವೇಳೆ ಪರಿಚಯಸ್ಥನೊಬ್ಬ ಬಾಲಕಿಯನ್ನ ಕರೆದೊಯ್ದಿದ್ದಾನೆ. ಆದರೆ ಎಷ್ಟೇ ಹೊತ್ತಾದರೂ ಮರಳಿ ಬಾರದ ಮಗಳಿಗಾಗಿ ತಾಯಿ ಹುಡುಕಾಟ ನಡೆಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ತಕ್ಷಣವೇ ಕಾರ್ಯಚರಣೆ ಆರಂಭಿಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಒಂದು ದಿನದ ಬಳಿಕ ಬಾಲಕಿ ಶವ ಪಾರ್ ಗ್ರಾಮದ ಬಯಲು ಪ್ರದೇಶದಲ್ಲಿ ಪತ್ತೆಯಾಗಿದೆ. 

ಪೊಲೀಸರು ಬಾಲಕಿ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಸಂಸ್ಥಿಪುರ ಜಿಲ್ಲೆಯ ಸರ್ದಾರ ಆಸ್ಪತ್ರೆಗೆ  ಕಳುಹಿಸಿದ್ದಾರೆ. ಅಲ್ಲದೇ ಪ್ರಾಥಮಿಕ ವರದಿ ಪ್ರಕಾರ ಬಾಲಿಕ ಮೇಲೆ ಅತ್ಯಾಚರ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಶೀಘ್ರದಲ್ಲಿ ಆರೋಪಿಯನ್ನ ಪತ್ತೆಹಚ್ಚಲಾಗುವುದು ಎಂದು ಡಿಎಸ್‌ಪಿ ಕುಂದನ್ ಕುಮಾರ್ ಹೇಳಿದ್ದಾರೆ.
 

loader