ಆಗ್ರಾ[ಜು. 09] ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ ಹೆಣ್ಣು ನಾಯಿಯ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು ಮೂವರ ಮೇಲೆ ಪ್ರಕರಣ ದಾಖಲಾಗಿದೆ.

ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 11(ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಸೆಕ್ಷನ್) 377 (ಅಸ್ವಾಭಾವಿಕ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಏನಿದು ಪ್ರಕರಣ:  ಜಲೇಸರ್‌ ರಸ್ತೆ ಪ್ರದೇಶದಲ್ಲಿ ಮಾಲೀಕರ ಮನೆಯಿಂದ ಕೆನಿನ್‌ ಎನ್ನುವ ನಾಯಿಯನ್ನು ಅಪಹರಣ ಮಾಡೊದ ಕಾಮುಕರು  ನಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳನ್ನು ದಿನೇಶ್‌ ಕುಮಾರ್‌, ಸತೀಶ್‌ ಮತ್ತು ಅಶೋಕ್ ಎಂದು ಗುರುತಿಸಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಹೊಟೇಲ್ ಮಾಲಿಕ ಕಣ್ಣಿನಲ್ಲೇ ರೇಪ್ ಮಾಡಿದ

ನಾಯಿ ಮೇಲೆ ಆದ ದೌರ್ಜನ್ಯದ ನೋವು ತೋಡಿಕೊಂಡ ಮನೆ ಮಾಲೀಕ ಸಂತೋಷ್, ಆರೋಪಿಗಳು ನಮ್ಮ ಕುಟುಂಬಕ್ಕೆ ಹತ್ತಿರದವರಾಗಿದ್ದರು ಮತ್ತು ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನಾಯಿಗೆ ಮೊಟ್ಟೆಯ ಆಸೆ ತೋರಿ ಅಪಹರಣ ಮಾಡಿದ್ದಾರೆ ಎಂದಿದ್ದಾರೆ.

ರಾತ್ರಿ 10 ಗಂಟೆ ಸುಮಾರಿನಿಂದ ಕಾಣೆಯಾಗಿದ್ದ ನಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಇಲ್ಲೇ ಎಲ್ಲೋ ಹೋಗಿರಬಹುದು ಎಂದು ಭಾವಿಸಿದ್ದ ಅವರಿಗೆ ಮುಂಜಾನೆಯಾದರೂ ನಾಯಿ ಬರದಿದ್ದನ್ನು ಕಂಡು ಹೊರಗೆ ಹುಡುಕಾಟ ಕೈಗೊಂಡಾಗ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿರುವ ನಾಯಿ ದಿನೇಶ್‌ನ ಮನೆಯಲ್ಲಿ ಪತ್ತೆಯಾಗಿದೆ. ಸಾಕು ನಾಯಿಯ ವೈದ್ಯಕೀಯ ಪರೀಕ್ಷೆ ಮಾಡಿದಾಗ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ.