ನವದೆಹಲಿ[ನ.04] ಮದುವೆಯಾಗದವರಿಗೆ ಸನ್ಮಾನ, ಎರಡು ಮಕ್ಕಳನ್ನು ಹೊಂದಿದ್ದರೆ ಪರವಾಗಿಲ್ಲ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಮತದಾನದ ಹಕ್ಕು ನೀಡಬೇಡಿ.. ಇದು ಯೋಗ ಗುರು ಬಾಬಾ ರಾಮ್ ದೇವ್ ಹೊಸ ಆಲೋಚನೆ.

ವಿವಾಹಿತ ದಂಪತಿಗಳಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳು ಇದ್ದರೆ, ಅವರ ಮತದಾನದ ಹಕ್ಕನ್ನು ನಿರಾಕರಿಸಬಹುದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ನನ್ನಂತಹ ಯೋಗಿಗಳನ್ನು, ಬ್ರಹ್ಮಚಾರಿಗಳನ್ನು ಗೌರವಿಸಬೇಕು. ಇದಾಗಲೇ ಜನಸಂಖ್ಯೆಯು ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ.ಇನ್ನು ಎರಡಕ್ಕಿಂತ ಹೆಚ್ಚು ಮಕಳನ್ನು ಪಡೆಯುವ ಮೂಲಕ ಇನ್ನಷ್ಟು ಅಪಾಯದ ಹಂತಕ್ಕೆ ತಲುಪಿದೆ ಎಂದಿದ್ದಾರೆ.