ಮುಂಬೈ[ಫೆ.06]  ಅತ್ಯಾಚಾರ, ಕೊಲೆ, ಜಮೀನು ಗಲಾಟೆ.. ಆಸ್ತಿ ವಿಚಾರ..ದರೋಡೆ ಈ ಎಲ್ಲದರ ಮೇಲೆ ಕೇಸು ದಾಖಲಾಗುವುದು ಸರ್ವೇ ಸಾಮಾನ್ಯ. ಆದರೆ ಈ ಪ್ರಕರಣ ಅದೆಲ್ಲದಕ್ಕಿಂತ ಭಿನ್ನವಾಗಿದೆ.

ಇಲ್ಲೊಬ್ಬ ಪುಣ್ಯಾತ್ಮ ತನ್ನ ಪೋಷಕರ ಮೇಲೆ ದೂರು ದಾಖಲು ಮಾಡಿದ್ದಾನೆ.  ನನ್ನ ಅನುಮತಿ ಇಲ್ಲದೇ ನೀವು ಹೇಗೆ ನನ್ನ ಹುಟ್ಟಿಸಿದಿರಿ? ಎಂದು ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದಾನೆ.

ಮುಂಬೈ ಮೂಲದ 27 ವರ್ಷದ ಸ್ಯಾಮ್ಯುಯಲ್ ರಫೆಲ್‌ ಈ ರೀತಿ ವಿಚಿತ್ರ ರೀತಿಯ ದೂರು ದಾಖಲಿಸಲು ಸಿದ್ಧತೆ ನಡೆಸಿಕೊಂಡಿದ್ದಾನೆ. ತನ್ನ ಅನುಮತಿಯಿಲ್ಲದೇ ಭೂಮಿ ಮೇಲೆ ತನ್ನನ್ನು ತಂದಿದ್ದು ತಪ್ಪು ಎಂದು ವಾದ  ಮುಂದಿಟ್ಟಿದ್ದಾನೆ

ಮನುಷ್ಯ ಭೂಮಿಗೆ ಮಾರಕ.  ನನಗೆ ಭೂಮಿಗೆ ಬರಲು ಇಷ್ಟವಿರಲಿಲ್ಲ. ಇಲ್ಲಿಗೆ ಬಂದು ಜೀವನದ ಜಂಜಾಟದಲ್ಲಿ ನಲುಗಬೇಕಾಗಿದೆ ಎಂದಿರುವ ಈತ ತಂದೆ ತಾಯಿ ಮೇಲೆ ಪ್ರಕರಣ ದಾಖಲು ಮಾಡಲು ಸಿದ್ಧವಾಗಿದ್ದಾನೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.