ಇವರೆಂಥಾ ಖದೀಮರು.! ಮಾರಮ್ಮನ ದೇವಸ್ಥಾನಕ್ಕೆ ಕನ್ನ ಹಾಕಿದರು!

Thief in Maramma Temple
Highlights

ಮಾರಮ್ಮನ ದೇವಸ್ಥಾನದಲ್ಲಿ ಹುಂಡಿಯೊಡೆದು ಕಳ್ಳತನ ಮಾಡಿರುವ ಘಟನೆ  ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಪುರ ಗ್ರಾಮದಲ್ಲಿ ನಡೆದಿದೆ.  ಹುಂಡಿಯಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಹಣ, ದೇವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ, ಮೈಕ್ ಸೆಟ್ ಸೇರಿದಂತೆ ಹಲವು ಉಪಕರಣಗಳನ್ನು  ನಿನ್ನೆ ತಡರಾತ್ರಿ ಕಳವು ಮಾಡಿದ್ದಾರೆ. 

ಬೆಂಗಳೂರು (ಏ.23): ಮಾರಮ್ಮನ ದೇವಸ್ಥಾನದಲ್ಲಿ ಹುಂಡಿಯೊಡೆದು ಕಳ್ಳತನ ಮಾಡಿರುವ ಘಟನೆ  ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಪುರ ಗ್ರಾಮದಲ್ಲಿ ನಡೆದಿದೆ. 

ಹುಂಡಿಯಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಹಣ, ದೇವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ, ಮೈಕ್ ಸೆಟ್ ಸೇರಿದಂತೆ ಹಲವು ಉಪಕರಣಗಳನ್ನು  ನಿನ್ನೆ ತಡರಾತ್ರಿ ಕಳವು ಮಾಡಿದ್ದಾರೆ.  ದೇವಸ್ಥಾನದ ಒಳಗಿದ್ದ ಬೀರುವನ್ನು ಒಡೆದು ರೇಷ್ಮೆಸೀರೆಗಳು, ತಾಯಿಯ ಅಲಂಕಾರದ ವಸ್ತುಗಳನ್ನು ಖದೀಮರು ಕದ್ದಿದ್ದಾರೆ. 

ಚನ್ನಪಟ್ಟಣದ ಎಂ.ಕೆ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.  ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

loader