Asianet Suvarna News Asianet Suvarna News

ಜಾಗತಿಕ ಹಸಿವು, ಭಾರತವೇಕೆ ಇಷ್ಟೊಂದು ಹಿಂದಿದೆ?

2019ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವರದಿ ಬಿಡುಗಡೆಯಾಗಿದ್ದು, ಜಗತ್ತಿನ 117 ರಾಷ್ಟ್ರಗಳ ಪೈಕಿ ಭಾರತ 102ನೇ ಸ್ಥಾನ ಪಡೆದು ಕಳಪೆ ಸಾಧನೆ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಹಸಿವು ಸೂಚ್ಯಂಕ ಅಂದರೆ ಏನು, ಇದರ ಮಾನದಂಡಗಳೇನು, ಭಾರತ ಏಕೆ ಕಳಪೆ ಸಾಧನೆ ಮಾಡಿದೆ ಎಂಬ ಸಂಕ್ಷಿಪ್ತ ವರದಿ ಇಲ್ಲಿದೆ.

The Reason Why India falls to 102 in hunger index
Author
Bangalore, First Published Oct 18, 2019, 4:53 PM IST

ಜಾಗತಿಕ ಹಸಿವು ಸೂಚ್ಯಂಕ ಅಂದರೆ ಏನು?

ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು (ಐಎಫ್‌ಪಿಆರ್‌ಐ) ಹಸಿವು ಸೂಚ್ಯಂಕವನ್ನು ರೂಪಿಸಿದ್ದು, ಜಾಗತಿಕ ಹಸಿವಿನ ವಿರುದ್ಧ ಹೋರಾಟಕ್ಕೆ ನೆರವು ನೀಡುತ್ತಿದೆ. ಜಾಗತಿಕ ಹಸಿವು ಸೂಚ್ಯಂಕ (ಜಿಹೆಚ್‌ಐ) ಎನ್ನುವುದು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರಗಳ ಮಟ್ಟದಲ್ಲಿ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯಲು ಮತ್ತು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಸಾಧನ.

ಹಸಿವನ್ನು ಎದುರಿಸುವಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ಪ್ರತಿವರ್ಷ ಜಿಹೆಚ್‌ಐ ಶ್ರೇಣಿಗಳ ಪ್ರಗತಿ ಅಥವಾ ಅದರ ಕೊರತೆಯನ್ನು ನಿರ್ಣಯಿಸಲು ಲೆಕ್ಕಾಚಾರ ಮಾಡುತ್ತದೆ. ಮಕ್ಕಳ ಅಪೌಷ್ಠಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಮಕ್ಕಳ ತೂಕ ಮತ್ತು ಶಿಶು ಮರಣ ಪ್ರಮಾಣದ ಆಧಾರದ ಮೇಲೆ ಜಾಗತಿಕ ಹಸಿವು ಸೂಚ್ಯಂಕವನ್ನು ಲೆಕ್ಕ ಹಾಕಲಾಗುತ್ತದೆ. ಈ ಅಂಶಗಳ ಆಧಾರದ ಮೇಲೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪ್ರತಿ ವರ್ಷ ವರದಿ ಪ್ರಕಟಿಸುತ್ತದೆ.

ಭಾರತದ ಕಳಪೆ ಸಾಧನೆಗೆ ಕಾರಣ ಏನು?

2010ರಲ್ಲಿ 95ನೇ ಶ್ರೇಣಿಯಲ್ಲಿದ್ದ ಭಾರತ 2019ರಲ್ಲಿ 102ಕ್ಕೆ ಕುಸಿಯಲು ಕಾರಣ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆ ಬಗ್ಗೆ ವಹಿಸಿರುವ ದಿವ್ಯ ನಿರ್ಲಕ್ಷ್ಯ. ಜಿಎಚ್‌ಐ ಸೂಚ್ಯಂಕದ ವರದಿ ಪ್ರಕಾರ- ಹಸಿವಿನ ಬಗ್ಗೆ ಭಾರತದ ನೀರಸ ಕಾರ್ಯ ಕ್ಷಮತೆಯು ಮಕ್ಕಳ ಅಪೌಷ್ಟಿಕತೆ ತೀವ್ರವಾಗಿ ಹೆಚ್ಚಾಗಿರುವುದಕ್ಕೂ ನೇರ ಕಾರಣವಾಗಿದೆ.

ಮತ್ತೊಂದು ಆಘಾತಕಾರಿ ಅಂಕಿ ಅಂಶವೆಂದರೆ, ಭಾರತದಲ್ಲಿ ಗರ್ಭಾವಸ್ಥೆಯಿಂದಲೇ ಅಪೌಷ್ಟಿಕತೆ ಆರಂಭವಾಗುತ್ತದೆ. 6ರಿಂದ 23ತಿಂಗಳ ವಯಸ್ಸಿನ ಶಿಶುಗಳಲ್ಲಿ ಕೇವಲ 9.6 ಪ್ರತಿಶತದಷ್ಟುಮಕ್ಕಳಿಗೆ ಮಾತ್ರ ಕನಿಷ್ಠ ಸ್ವೀಕಾರಾರ್ಹ ಆಹಾರ ಲಭ್ಯವಾಗುತ್ತಿದೆ. ಅಂದರೆ ಪೌಷ್ಟಿಕಾಶಯುಕ್ತ ಆಹಾರ ಲಭ್ಯವಾಗುತ್ತಿದೆ. ಉಳಿದ ಶೇ.90ರಷ್ಟುಮಕ್ಕಳಿ ಪೌಷ್ಟಿಕಾಂಶಯುಕ್ತ ಆಹಾರ ಲಭ್ಯವಾಗುತ್ತಿಲ್ಲ.

ಜಾಗತಿಕ ಹಸಿವು ಸೂಚ್ಯಂಕ: ಪಾಕ್, ನೇಪಾಳಕ್ಕಿಂತ ಕೆಳಗಿಳಿದ ಭಾರತ!

ಹಸಿವು ಸೂಚ್ಯಂಕದ ವಿವಿಧ ಮಾನದಂಡಗಳಲ್ಲಿ ಭಾರತದ ಸಾಧನೆ ಹೇಗಿದೆ?

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈ ಸೂಚಿಗೆ ಪರಿಗಣಿಸಲಾಗುತ್ತದೆ. ಅಪೌಷ್ಟಿಕತೆ, ಶಿಶುಮರಣ ಪ್ರಮಾಣಕ್ಕಿಂತ ಮಕ್ಕಳ ಕುಂಠಿತ ಬೆಳವಣಿಗೆ ಸೂಚ್ಯಂಕದಲ್ಲಿ ಭಾರತ ಅತ್ಯಂತ ಕಳಪೆ ಸಾಧನೆ ಮಾಡಿದೆ. ಆದರೆ ಶಿಶು ಮರಣ ಪ್ರಮಾಣದಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ.

ಅಪೌಷ್ಟಿಕತೆ

ಇಸವಿ 2000 2005 2010 2019
ಸಾಧನೆ 18.2 22.3 17.5 14.4

 

ಕಡಿಮೆ ತೂಕದ ಮಕ್ಕಳು

ಇಸವಿ 2000 2005 2010 2019
ಸಾಧನೆ 17.1 20 16.5 20.8

ಮಕ್ಕಳ ಕುಂಠಿತ ಬೆಳವಣಿಗೆ

ಇಸವಿ 2000 2005 2010 2019
ಸಾಧನೆ 54.2 47.8 42 37.9

 

ಶಿಶುಮರಣ 

ಇಸವಿ 2000 2005 2010 2019
ಸಾಧನೆ 9.2 7.5 5.8 3.9

ಜಗತ್ತಲ್ಲಿ ಒಂದೊತ್ತಿನ ಊಟವೂ ಇಲ್ಲದೆ ಮಲಗುವವರ ಸಂಖ್ಯೆ 82 ಕೋಟಿ!

ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಒಂದು ಹೊತ್ತಿನ ಊಟವೂ ಇಲ್ಲದೆ ಹಾಗೆಯೇ ಮಲಗುವ ಜನರ ಸಂಖ್ಯೆ 2015ರಿಂದೀಚೆಗೆ ಹೆಚ್ಚಾಗಿದೆಯಂತೆ. 2015ರಲ್ಲಿ 78.5ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರೆ ಈ ಸಂಖ್ಯೆ 2019ರಲ್ಲಿ 82.2 ಕೋಟಿಗೆ ಏರಿಕೆಯಾಗಿದೆ. ಹಲವು ದೇಶಗಳಲ್ಲಿ 2010ರಿಂದೀಚೆಗೆ ಹಸಿವಿನಿಂದ ಜೀವಿಸುತ್ತಿರುವ ಜನರ ಸಂಖೆಯ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 117 ದೇಶಗಳ ಪೈಕಿ 47 ದೇಶಗಳು ‘ಗಂಭೀರ ಮತ್ತು ಆತಂಕಕಾರಿ’ ಹಸಿವಿನ ಮಟ್ಟದಲ್ಲಿವೆ ಮತ್ತು ಒಂದು ದೇಶದ ಸ್ಥಿತಿ ತೀವ್ರ ಆತಂಕಕಾರಿಯಾಗಿದೆ’ ಎಂದು ಜಿಎಚ್‌ ವಾರ್ಷಿಕ ವರದಿ ತಿಳಿಸಿದೆ.

'ಬಡವರ ಹಸಿವು ತಣಿಸಲಿದೆ ಇಂದಿರಾ ಕ್ಯಾಂಟೀನ್'

ಆಹಾರವನ್ನು ತಿಪ್ಪೆಗೆ ಎಸೆಯುತ್ತಾರೆ

ಭಾರತದಲ್ಲಿ ಹಸಿವಿನಿಂದ ನರಳುವವರ ಸಂಖ್ಯೆ ಎಷ್ಟಿದೆಯೋ ಹಾಗೆಯೇ ಅನ್ನವನ್ನು ಅಪವ್ಯಯ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಇಲ್ಲಿನ ಶ್ರೀಮಂತರು ನಿತ್ಯ ತಿನ್ನುವ ಆಹಾರದಲ್ಲಿ 20% ಆಹಾರವನ್ನು ತಿಪ್ಪೆಗೆ ಎಸೆಯುತ್ತಾರಂತೆ. ವರದಿಯೊಂದರ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಗೆ ವರ್ಷಕ್ಕೆ 22.5 ಕೋಟಿ ಟನ್‌ ಆಹಾರ ಬೇಕಾಗುತ್ತದೆ. ಆದರೆ ವಾರ್ಷಿಕ 88,000 ಕೋಟಿ ರು. ಆಹಾರ ಅಪವ್ಯಯವಾಗುತ್ತಿಯಂತೆ.

Follow Us:
Download App:
  • android
  • ios