Asianet Suvarna News Asianet Suvarna News

ಬ್ರಿಫ್ ಕೇಸ್ ಹೆಸರಲ್ಲಿ ಸಮ್ಮಿಶ್ರ ಸರ್ಕಾರದ ಮೊದಲ ಭ್ರಷ್ಟಾಚಾರ?

ನೂತನ ಶಾಸಕರ ಹೆಸರಿನಲ್ಲಿ ನಡೆಯಿತಾ ಕೋಟಿ ಕೋಟಿ ಲೂಟಿ?

ನೂತನ ಶಾಸಕರ ಹೆಸರಿನಲ್ಲಿ ಟೆಂಡರ್ ಇಲ್ಲದೆ ಬ್ರಿಫ್ ಕೇಸ್ ಖರೀದಿ 

ವಿಧಾನಸಭೆ ಕಾರ್ಯಾಲಯದಿಂದ ನಡೆದಿದೆ ಭ್ರಹ್ಮಾಂಡ ಭ್ರಷ್ಟಾಚಾರ?

ಟೆಂಡರ್ ಕರೆಯದೇ ಬ್ರಿಫ್ ಕೇಸ್ ಖರೀದಿಸಿರುವ ಆರೋಪ 

ಅಮೇರಿಕನ್ ಟೂರಿಸ್ಟರ್ ಕಂಪನಿಯ ಬ್ರಿಫ್ ಕೇಸ್ ಖರೀದಿ 

ಅಧಿಕಾರಿಗಳ ನಡೆಗೆ ಸ್ಪೀಕರ್ ರಮೇಶ್ ಕುಮಾರ್ ಗರಂ

ಬೆಂಗಳೂರ(ಜು.14): ಮೈತ್ರಿ ಸರ್ಕಾರ ರಚನೆ ಬಳಿಕ ಮೊದಲ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ನೂತನ ಶಾಸಕರಿಗೆ ಬ್ರಿಫ್  ಕೇಸ್ ಖರೀದಿಗೆ ವಿಧಾನಸಭೆ ಕಾರ್ಯಾಲಯ ಮುಂದಾಗಿದ್ದು, ಟೆಂಡರ್ ಕರೆಯದೇ ಬ್ರಿಫ್ ಕೇಸ್ ಖರೀದಿಸಿದೆ ಎನ್ನಲಾಗಿದೆ.

ನೂತನ ಶಾಸಕರಿಗೆ ಕೊಡಲು ಟೆಂಡರ್ ಕರೆಯದೇ ಬ್ರಿಫ್ ಕೇಸ್ ಗಳನ್ನು ಖರೀದಿ ಮಾಡಲಾಗಿದ್ದು, ಇವುಗಳನ್ನು ವಿಧಾನಸೌಧದಲ್ಲಿ ಸಂಗ್ರಹಿಸಿ ಇಡಲಾಗಿದೆ ಎನ್ನಲಾಗಿದೆ. ಅಧಿಕಾರಿಗಳು ಅಮೆರಿಕನ್ ಟೂರಿಸ್ಟರ್ ಕಂಪನಿಯ 224 ಬ್ರಿಫ್ ಕೇಸ್ ಖರೀದಿ ಮಾಡಿದ್ದು, 15 ನೇ ವಿಧಾನಸಭೆಗೆ ಆಯ್ಕೆಯಾದ ನೂತನ ಸದಸ್ಯರಿಗೆ ಇವುಗಳನ್ನು ನೀಡಲಾಗುವುದು.

ಅಧಿಕಾರಿಗಳ ಈ ನಡೆಗೆ ಸ್ಪೀಕರ್ ರಮೇಶ್ ಕುಮರ್ ಗರಂ ಆಗಿದ್ದು, ಈ ಹಿನ್ನೆಲೆಯಲ್ಲಿ ಈ ಬ್ರಿಫ್ ಕೇಸ್ ಗಳನ್ನು ಶಾಸಕರಿಗೆ ಹಂಚಿಕೆ ಮಾಡದೆ ಉಳಿಸಿಕೊಳ್ಳಲಾಗಿದೆ. ಒಂದು ವೇಳೆ ಈ ಬ್ರಿಫ್ ಕೇಸ್ ಗಳನ್ನು ಅಧಿಕೃತವಾಗಿ ಖರೀದಿ ಮಾಡಿದ್ದೇ ಆದರೆ ಪ್ರಮಾಣವಚನ ಸಂದರ್ಭದಲ್ಲಿ ಇವುಗಳನ್ನು ಏಕೆ ವಿತರಿಸಲಿಲ್ಲ ಎಂದು ಸ್ಪೀಕರ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಅಧಿವೇಶನ ಮುಗಿದರೂ ನೂತನ ಶಾಸಕರಿಗೆ ಈ ಭಾರಿ ನಡಾವಳಿಗಳ ಪುಸ್ತಕದ ಜೊತೆಗೆ ಬ್ರಿಫ್ ಕೇಸ್ ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮೂಲಗಳ ಪ್ರಕಾರ ಒಂದು ಬ್ರಿಫ್ ಕೇಸ್ ಗೆ ೫೦೦೦ ರೂ. ನಂತೆ ಒಟ್ಟು ಕೋಟಿಗೂ ಅಧಿಕ ರೂ.ಗಳನ್ನು ಖರ್ಚು ಮಾಡಲಾಗಿದೆ.

ಈ ಹಿಂದೆ ವಿಧಾನಸಭಾ ಸಚಿವಾಲಯದ ಕೊಠಡಿಗಳನ್ನು ನವೀಕರಣ ಮಾಡಿ ಅನಗತ್ಯ ವೆಚ್ಚ ಮಾಡಿದ್ದ ಅಧಿಕಾರಿಗಳು, ಇದೀಗ ಬ್ರಿಫ್ ಕೇಸ್ ಹೆಸರಲ್ಲಿ ಕೋಟಿ ಕೋಟಿ ರೂ.ಗಳನ್ನು ವೆಚ್ಛ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Video Top Stories