ಜಿಲ್ಲೆಯಲ್ಲೇ ಕಾಂಗ್ರೆಸ್‌ನ ಹವಾ ಎದ್ದಿದೆ

ರಾಹುಲ್‌ ಗಾಂಧಿಯವರ ಭಾರತ ಐಕ್ಯತಾ ಯಾತ್ರೆ ಶನಿವಾರ ತುರುವೇಕೆರೆ ತಾಲೂಕಿಗೆ ಆಗಮಿಸಲಿದ್ದು ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ

The atmosphere of Congress has risen in theTumkur  district

 ತುರುವೇಕೆರೆ (ಅ.07): ರಾಹುಲ್‌ ಗಾಂಧಿಯವರ ಭಾರತ ಐಕ್ಯತಾ ಯಾತ್ರೆ ಶನಿವಾರ ತುರುವೇಕೆರೆ ತಾಲೂಕಿಗೆ ಆಗಮಿಸಲಿದ್ದು ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ ಮತ್ತು ಬೆಸ್ಕಾಂನ ಮಾಜಿ ನಿರ್ದೇಶಕ ಬಿ.ಎಸ್‌.ವಸಂತಕುಮಾರ್‌ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಾಯಸಂದ್ರ ಗ್ರಾಮದಿಂದ ಆರಂಭಗೊಳ್ಳುವ ಪಾದಯಾತ್ರೆಗೆ ತಾಲೂಕಿನಿಂದಲೇ ಸುಮಾರು ಹತ್ತು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ (Congress) ಸದೃಢಗೊಂಡಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಸಂದೇಹವಿಲ್ಲ. ಹಾಗೆಯೇ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಜಯಗಳಿಸಲಿದೆ ಎಂದು ಭವಿಷ್ಯ ನುಡಿದರು.

ರಾಹುಲ್‌ ಗಾಂಧಿಯವರ(Rahul Gandhi) ಪಾದಯಾತ್ರೆ ಇಡೀ ಜಿಲ್ಲೆಯಲ್ಲೇ ಕಾಂಗ್ರೆಸ್‌ನ ಹವಾ ಎದ್ದಿದೆ. ಹೊಸ ಹುರುಪು ಆರಂಭವಾಗಿದೆ. ಎಲ್ಲ ಕಾರ್ಯಕರ್ತರು ಮತ್ತು ಮುಖಂಡರೆಲ್ಲರೂ ಪಾದಯಾತ್ರೆಯ ಯಶಸ್ಸಿಗೆ ಕಟಿಬದ್ದರಾಗಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಪಾದಯಾತ್ರೆಯ ಸಂಪೂರ್ಣ ಯಶಸ್ಸಿಗೆ ಕಾರಣೀಭೂತರಾಗಲಿದ್ದಾರೆ ಎಂದರು.

ರಾಹುಲ್‌ ಗಾಂಧಿಯವರೊಂದಿಗೆ ರಾಜ್ಯದ ಹಾಗೂ ಜಿಲ್ಲೆಯ ಹಲವಾರು ಕಾಂಗ್ರೆಸ್‌ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಸಹಸ್ರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎಲ್ಲರನ್ನೂ ಗೌರಯುತವಾಗಿ ಸ್ವಾಗತಿಸಲು ಕಾಂಗ್ರೆಸ್‌ ಯುವಕರ ತಂಡ ಸನ್ನದ್ಧವಾಗಿದೆ. ದಾರಿಯುದ್ದಕ್ಕೂ ವಿವಿಧ ತಿಸಿಸುಗಳು, ಪಾನೀಯದ ವ್ಯವಸ್ಥೆ ಮಾಡಲಾಗಿದೆ ಎಂದೂ ಸಹ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜ್ಞಾನೇಂದ್ರ, ಹಟ್ಟಿಹಳ್ಳಿ ಪುಟ್ಟಣ್ಣ, ಸುನಿಲ್‌ ಕುಮಾರ್‌, ಮೋಹನ್‌ ಕುಮಾರ್‌, ವಿನೋದ್‌, ಸಾಮಾಜಿಕ ತಾಣಾ ಮುಖ್ಯಸ್ಥ ಕೀರ್ತಿ ಕುಮಾರ್‌ ಇದ್ದರು.

ಹಿರಿಯೂರು

ಭಾರತ್‌ ಜೋಡೋ ಯಾತ್ರೆಗೆ ತಾಲೂಕಿನಲ್ಲಿ ಅತಿ ಹೆಚ್ಚಿನ ಜನ ಸೇರಬೇಕು ಎಂದು ಕಾಂಗ್ರೆಸ್‌ ಮುಖಂಡ ಬಿ. ಸೋಮಶೇಖರ್‌ ಮನವಿ ಮಾಡಿದರು.

ತಾಲೂಕಿಗೆ ಭಾರತ್‌ ಜೋಡೋ ಯಾತ್ರೆ ಆಗಮಿಸುವ ಹಿನ್ನೆಲೆಯಲ್ಲಿ ಗುರುವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವಂತೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಭಾರತ ದೇಶದ ಜನರ ಏಕತೆ, ಸರ್ವಧರ್ಮ ಸಮನ್ವಯತೆ ಹಾಗೂ ಸರ್ವ ಜನಾಂಗದವರನ್ನು ಒಗ್ಗೂಡಿಸಿ ಐಕ್ಯತೆ ಸಾರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸಂಸದ ರಾಹುಲ್‌ ಗಾಂ​ಧಿಯವರು ಇದೇ ಅ. 10 ರಂದು ಹಿರಿಯೂರಿಗೆ ಆಗಮಿಸುವ ಮೂಲಕ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡಲಿದ್ದು, ಸುಮಾರು ಮೂರು ದಿನಗಳ ಕಾಲ ತಾಲೂಕಿನಲ್ಲಿ ಯಾತ್ರೆ ಸಂಚರಿಸಲಿದೆ. ಈ ವೇಳೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಹೆಜ್ಜೆ ಹಾಕಲಿದ್ದು, ತಾಲೂಕಿನ ಪ್ರತಿ ಗ್ರಾಮಗಳಿಂದಲೂ ಕೂಡ ಜನಪ್ರತಿನಿ​ಗಳು, ಮಹಿಳೆಯರು, ಯುವಕರು, ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ತಾಲೂಕಿನ ಮದ್ದನಕುಂಟೆ, ಅಂಬಲಗೆರೆ, ಬ್ಯಾಡರಹಳ್ಳಿ, ಮಸ್ಕಲ್‌, ಮಸ್ಕಲ್‌ ಮಟ್ಟಿ, ಐನಹಳ್ಳಿ, ಹರ್ತಿಕೋಟೆ, ನಂದಿಹಳ್ಳಿ, ವಿವಿಪುರ, ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಲವು ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ಕನಕಗಿರಿ

ಅ. 15ರಂದು ಗಣಿ ನಾಡು ಬಳ್ಳಾರಿಗೆ ಆಗಮಿಸುವ ಭಾರತ್‌ ಜೋಡೊ ಯಾತ್ರೆಯಲ್ಲಿ ಕನಕಗಿರಿ ಕ್ಷೇತ್ರದಿಂದ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಮನವಿ ಮಾಡಿದರು.

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಭಾರತ್‌ ಜೋಡೊ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಪಕ್ಷವನ್ನು ಬಲಪಡಿಸುವ ಕೆಲಸವಾಗಬೇಕಿದೆ. ಬಳ್ಳಾರಿಗೆ ಅ. 15ರಂದು ಆಗಮಿಸುವ ಭಾರತ್‌ ಜೋಡೊ ಯಾತ್ರೆಯಲ್ಲಿ ಕನಕಗಿರಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಾತ್ರೆ ಯಶಸ್ವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರಸ್ವಾಮಿ, ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರೀನಿವಾಸ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪಪಂ ಸದಸ್ಯರಾದ ನೂರಸಾಬ ಗಡ್ಡಿಗಾಲ, ಸಂಗಪ್ಪ ಸಜ್ಜನ್‌, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ ಸೇರಿದಂತೆ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

Latest Videos
Follow Us:
Download App:
  • android
  • ios