Asianet Suvarna News Asianet Suvarna News

ವಿರಾಟ್ ಕೊಹ್ಲಿ ವಿರುದ್ಧ ಟೀಕೆ, ಪಾಕ್ ಕೈವಾಡದಿಂದ ತಾಲಿಬಾನ್ ಕೇಕೆ; ಸೆ.2ರ ಟಾಪ್ 10 ಸುದ್ದಿ!

ಮಾಜಿ ರಾಷ್ಟ್ರಪತಿಗೆ ಸಂತಾಪ ಸೂಚಿಸಿದ ಪಾಕಿಸ್ತಾನ ಕಾಶ್ಮೀರ ಪ್ರತ್ಯೇಕಿಸಲು ಹೊರಟ ಗಿಲಾನಿ ನಿಧನಕ್ಕೆ ಶೋಕಾಚರಣೆ ಆಚರಿಸಿದೆ. ಬಿಗ್‌ ಬಾಸ್ ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಶ್ವಿನ್‌ಗೆ ಸ್ಥಾನ ನೀಡಿದ ವಿರಾಟ್ ಕೊಹ್ಲಿ ವಿರುದ್ಧ ಟೀಕೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಬಿಜೆಪಿಯ ಮುಂದಿನ ಟಾರ್ಗೆಟ್ ಬಿಚ್ಚಿಟ್ಟ ಅರುಣ್ ಸಿಂಗ್, ಜಾಕ್ವೆಲಿನ್ ಸೆಕ್ಸ್ ಪ್ರತಿಕ್ರಿಯೆ ಸೇರಿದಂತೆ ಸೆಪ್ಟೆಂಬರ್ 2 ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Team india playing 11 to Afghanistan taliban top 10 news of September 2 ckm
Author
Bengaluru, First Published Sep 2, 2021, 5:22 PM IST
  • Facebook
  • Twitter
  • Whatsapp

 ಗಿಲಾನಿ ನಿಧನಕ್ಕೆ ಪಾಕ್‌ನಲ್ಲಿ ಶೋಕ: ತನ್ನದೇ ಮಾಜಿ ರಾಷ್ಟ್ರಪತಿ ಸಾವಿಗಿರಲಿಲ್ಲ ಈ ದುಃಖ!

Team india playing 11 to Afghanistan taliban top 10 news of September 2 ckm

ಭಾರತ ವಿರೋಧಿ ಹೇಳಿಕೆಗಳಿಂದಲೇ ವಿವಾದಕ್ಕೀಡಾಗುತ್ತಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ, 92 ವರ್ಷದ ಸೈಯದ್ ಅಲಿ ಶಾ ಗಿಲಾನಿ ದೀರ್ಘ ಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹೀಗಿರುವಾಗ ಗಿಲಾನಿ ನಿಧನಕ್ಕೆ ಪಾಕಿಸ್ತಾನ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. 

ಅಂದು ಸುಶಾಂತ್, ಇಂದು ಸಿದ್ಧಾರ್ಥ್: ಕೂಪರ್ ಹಾಸ್ಪಿಟಲ್‌ ವಿರುದ್ಧ 'ಹತ್ಯೆ' ಆರೋಪ!

Team india playing 11 to Afghanistan taliban top 10 news of September 2 ckm

ಬಿಗ್‌ ಬಾಸ್ ಸೀಜನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಲ್ವತ್ತು ವರ್ಷದ ಸಿದ್ಧಾರ್ಥ್ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಆಫ್ಘನ್‌ ತಾಲಿಬಾನ್‌ ವಶದ ಹಿಂದೆ ಪಾಕಿಸ್ತಾನ ಕೈವಾಡ: ಬಯಲಾಯ್ತು ಸಂಚು!

Team india playing 11 to Afghanistan taliban top 10 news of September 2 ckm

ಸುಮಾರು 50 ಸಾವಿರದಷ್ಟಿದ್ದ ತಾಲಿಬಾನಿ ಉಗ್ರರು 3 ಲಕ್ಷದಷ್ಟಿದ್ದ ಅಷ್ಘಾನಿಸ್ತಾನ ಯೋಧರನ್ನು ಮಣಿಸಿ ಕೇವಲ 15 ದಿನಗಳಲ್ಲಿ ಇಡೀ ದೇಶವನ್ನು ಆಕ್ರಮಿಸಿಕೊಂಡಿದ್ದು ಹೇಗೆ ಎಂಬುದು ಇಡೀ ವಿಶ್ವವನ್ನೇ ಅಚ್ಚರಿಗೆ ಗುರಿ ಮಾಡಿದೆ. ಆದರೆ ಇಂಥದ್ದೊಂದು ಸೂಪರ್‌ಫಾಸ್ಟ್‌ ದಾಳಿಯ ಹಿಂದೆ ನೆರೆಯ ಪಾಕಿಸ್ತಾನದ ಕೈವಾಡವಿತ್ತು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಇದರೊಂದಿಗೆ ಅಷ್ಘಾನಿಸ್ತಾನ ವಶಪಡಿಸಿಕೊಳ್ಳಲು ಪಾಕಿಸ್ತಾನ ಸರ್ಕಾರ ರಹಸ್ಯವಾಗಿ ತಾಲಿಬಾನಿಗಳನ್ನು ಬೆಂಬಲಿಸಿದ್ದು ಬಟಾಬಯಲಾಗಿದೆ.

ತಾಲಿಬಾನಿಗಳನ್ನು ಬೆಂಬಲಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯೇ ಪಾಕ್ ಮುಂದಿನ PM..?

Team india playing 11 to Afghanistan taliban top 10 news of September 2 ckm

ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಉಗ್ರಗಾಮಿ ಗುಂಪಾದ ತಾಲಿಬಾನಿಗಳ ಕುರಿತಂತೆ ಮೃದು ದೋರಣೆ ತಳೆದ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Ind vs Eng 4ನೇ ಟೆಸ್ಟ್‌ಗೂ ಅಶ್ವಿನ್‌ಗಿಲ್ಲ ಸ್ಥಾನ: ಆಯ್ಕೆ ಸಮಿತಿಗೆ ಬುದ್ದಿಯಿಲ್ಲ ಎಂದ ಇಂಗ್ಲೆಂಡ್‌ ಮಾಜಿ ನಾಯಕ..!

Team india playing 11 to Afghanistan taliban top 10 news of September 2 ckm

ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ಆರಂಭವಾಗಿದ್ದು, ಮತ್ತೊಮ್ಮೆ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. 4ನೇ ಟೆಸ್ಟ್‌ನಲ್ಲಿ ಅಶ್ವಿನ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಮತ್ತೊಮ್ಮೆ ತಲೆಕೆಳಗಾಗಿದೆ. ಅದೇ ರೀತಿ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಒಮ್ಮೇನಾದ್ರೂ ಕಾರಲ್ಲಿ ಸೆಕ್ಸ್‌ ಮಾಡಿದ್ರಾ ಎಂದಾಗ ಜಾಕಿ ರಿಯಾಕ್ಷನ್ ಇದು

Team india playing 11 to Afghanistan taliban top 10 news of September 2 ckm

ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಹಳೆಯ ವಿಡಿಯೋ ತುಣುಕೊಂದು ವೈರಲ್ ಆಗಿದೆ. ಅದರಲ್ಲಿ ನಟಿ ಕಾರಿನಲ್ಲಿ ಸಂಭೋಗ ನಡೆಸಿರುವ ಬಗ್ಗೆ ಉತ್ತರಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅಮಂಡಾ ಸೆರ್ನಿ ಅವರು 'ಫೀಲ್ ಗುಡ್' ಪಾಡ್‌ಕಾಸ್ಟ್ ಅನ್ನು ಆಯೋಜಿಸಿದ್ದಾರೆ.

ತಾಲಿಬಾನ್ ಗೆಲುವು ಆಚರಿಸುವ ಭಾರತೀಯ ಮುಸ್ಲಿಮರು ಅಪಾಯಕಾರಿ; ನಾಸಿರುದ್ದೀನ್ ಶಾ!

Team india playing 11 to Afghanistan taliban top 10 news of September 2 ckm

ತಾಲಿಬಾನ್ ಉಗ್ರರೇ ಬೆಸ್ಟ್ ಎಂದು ಡಂಗುರ ಸಾರುತ್ತಿರುವ ಭಾರತೀಯ ಮುಸ್ಲಿಮರಿಗೆ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಮುಸ್ಲಿಮರು ತಾಲಿಬಾನ್ ಗೆಲುವು ಆಚರಿಸುತ್ತಿರುವುದು ಅಪಾಯಕಾರಿ ಎಂದು ನಾಸಿರುದ್ದೀನ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯ ಮುಂದಿನ ಟಾರ್ಗೆಟ್ ಈ ಪ್ರದೇಶ.. ಗುಟ್ಟು ಬಿಚ್ಚಿಟ್ಟ ಅರುಣ್ ಸಿಂಗ್

Team india playing 11 to Afghanistan taliban top 10 news of September 2 ckm

ನಾನು ಪಾರ್ಟಿ ಬಲಪಡಿಸುವ ಸಲುವಾಗಿ ಟೂರ್ ಮಾಡಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಾರ್ಟಿ ಬಲಪಡಿಸಲು ಸಭೆ ಮಾಡಲಾಗಿದೆ. ಜೊತೆಗೆ ಮೋದಿ ಸ್ಕೀಮ್ ಜನರಿಗೆ ತಲುಪಿಸುವ ಸಲುವಾಗಿ ಕಾರ್ಯಕರ್ತರಿಗೆ ತಿಳಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ  ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟ್ ಗೊಲ್ಲೋದು ನಮ್ಮ ಗುರಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. 

Follow Us:
Download App:
  • android
  • ios