Asianet Suvarna News Asianet Suvarna News

ಮಕ್ಕಳ ಅಕ್ರಮ ಮಾರಾಟ ಪ್ರಾರಂಭಿಸಿದ್ದೇ ಮದರ್ ತೆರೆಸಾ: ತಸ್ಲೀಮಾ ನಸ್ರೀನ್!

ಮದರ್ ತೆರೆಸಾ ಮಿಷನರಿಯಲ್ಲಿ ಮಕ್ಕಳ ಅಕ್ರಮ ಮಾರಾಟ

ಪ.ಬಂಗಾಳ ಸಿಎಂ ವಿರುದ್ಧ ಹರಿಹಾಯ್ದ ತಸ್ಲೀಮಾ ನಸ್ರೀನ್

ಅಪರಾಧಿಗಳ ರಕ್ಷಣೆ ಸಲ್ಲ ಎಂದ ಬಾಂಗ್ಲಾ ಬರಹಗಾರ್ತಿ

ಮಿಷನರಿಗಳಲ್ಲಿ ಮಕ್ಕಳ ಮಾರಾಟ ನಿಜ ಎಂದ ತಸ್ಲೀಮಾ

Taslima Nasreen Joins Issue With Mamata On Mother Teresa’s Missionary, Says Don’t Protect Criminals
Author
Bengaluru, First Published Jul 14, 2018, 10:24 PM IST

ನವದೆಹಲಿ(ಜು.14): ಮದರ್ ತೆರೆಸಾ ಮಿಷಿನರಿಸ್ ಚಾರಿಟಿಯಲ್ಲಿ ಮಕ್ಕಳ ಅಕ್ರಮ ಮಾರಾಟ ಜಾಲದ ಆರೋಪಕ್ಕೆ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ ನೀಡಿದ್ದಾರೆ.

ಮಿಷನರಿಗಳಲ್ಲಿ ಮಕ್ಕಳನ್ನು ಅಕ್ರಮವಾಗಿ ಮಾರಾಟ ಮಾಡುವುದು ಹೊಸದೇನಲ್ಲ ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ. ಅಲ್ಲದೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಪ್ಪಿಸತಸ್ಥರನ್ನು ರಕ್ಷಿಸುವ ಕೆಲಸ ಮಾಡಬಾರದು ಎಂದೂ ತಸ್ಲೀಮಾ ಆಗ್ರಹಿಸಿದ್ದಾರೆ.

ಬಿಜೆಪಿ ಕ್ರಿಶ್ಚಿಯನ್ ಮಿಷಿನರಿಗಳ ಮೇಲೆ ಸುಳ್ಳು ಅರೋಪ ಮಾಡಿ ಅವುಗಳ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆಸಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಮಿಷಿನರಿಗಳ ಮೇಲೆ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಮಮತಾ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ತಸ್ಲೀಮಾ, ಮಿಷಿನರಿಗಳು ಅಕ್ರಮವಾಗಿ ಮಕ್ಕಳನ್ನು ಮಾರಾಟ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮಮತಾ ಬೇರೆಯವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಖುದ್ದು ಮದರ್ ತೆರೆಸಾ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದರೆಂದು ತಸ್ಲೀಮಾ ಗಂಭೀರ ಆರೋಪ ಮಾಡಿದ್ದಾರೆ. 

ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿರುವ ನಿರ್ಮಲ್ ಹೃದಯ ಮಿಷಿನರಿಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು, ಇದರಲ್ಲಿ ಮಿಷಿನರಿಯ ಸಿಸ್ಟರ್ ಗಳ ಪಾತ್ರವಿರುವುದು ಈಗಾಗಲೇ ಖಚಿತವಾಗಿದೆ. ಸಿಸ್ಟರ್ ಕೊನ್ಸಾಲಿಯಾ ತಾನು ಮೂರು ಮಕ್ಕಳನ್ನು ಮಾರಾಟ ಮಾಡಿದ್ದಾಗಿ ಈಗಾಗಲೇ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಖಂಡಿಸಿರುವ ತಸ್ಲೀಮಾ, ಬೇರೆಯವರ ಮೇಲೆ ಆರೋಪ ಮಾಡುವುದಕ್ಕೂ ಮೊದಲು ಸತ್ಯವನ್ನು ಅರಿಯಬೇಕು ಎಂದು ಆಗ್ರಹಿಸಿದ್ದಾರೆ.

Follow Us:
Download App:
  • android
  • ios