ಅತ್ಯಾಚಾರ, ಕೊಲೆಗಿಂತ ಹಸ್ತಮೈಥುನ ಒಳ್ಳೆಯದು: ತಸ್ಲೀಮಾ ವಿವಾದಿತ ಟ್ವೀಟ್‌

First Published 14, Feb 2018, 10:55 AM IST
Taslima Nasreen Calls Delhi bus Masturbation Incident Victimless Crime gets slammed on Social media
Highlights

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಬಸ್‌ನಲ್ಲಿ ತನ್ನ ಪಕ್ಕ ಕುಳಿತ ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿದ್ದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಲೇಖಕಿ ತಸ್ಲೀಮಾ ನಸ್ರೀನ್‌, ಹಸ್ತ ಮೈಥುನ ಮಾಡಿಕೊಳ್ಳುವುದು ಅತ್ಯಾಚಾರ ಮತ್ತು ಕೊಲೆಗಿಂತಲೂ ಉತ್ತಮ ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ.

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಬಸ್‌ನಲ್ಲಿ ತನ್ನ ಪಕ್ಕ ಕುಳಿತ ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿದ್ದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಲೇಖಕಿ ತಸ್ಲೀಮಾ ನಸ್ರೀನ್‌, ಹಸ್ತ ಮೈಥುನ ಮಾಡಿಕೊಳ್ಳುವುದು ಅತ್ಯಾಚಾರ ಮತ್ತು ಕೊಲೆಗಿಂತಲೂ ಉತ್ತಮ ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ.

ಜನ ಸಂದಣಿ ಇರುವ ಬಸ್‌ನಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡರೆ, ಇಂದಿನ ಅತ್ಯಾಚಾರದ ಯುಗದಲ್ಲಿ ಅದನ್ನು ಅಪರಾಧವೆಂದು ಪರಿಗಣಿಸಬಾದರು. ಅತ್ಯಾಚಾರ ಅಥವಾ ಕೊಲೆ ಮಾಡುವುದಕ್ಕಿಂತ ಪುರುಷನೊಬ್ಬ ಹಸ್ತಮೈಥುನ ಮಾಡಿಕೊಳ್ಳುವುದು ಒಳ್ಳೆಯದು ಎಂದು ತಸ್ಲೀಮಾ ಟ್ವೀಟ್‌ ಮಾಡಿದ್ದಾರೆ.

 

loader