Asianet Suvarna News Asianet Suvarna News

ಸಾಮಾನ್ಯ ಮೀನುಗಾರ ಈಗ ಭಾರತೀಯ ನೌಕಾ ಪಡೆ ಕೆಡೆಟ್

ಅಂದು ಸಾಮಾನ್ಯ ಮೀನುಗಾರನಾಗಿದ್ದ ವ್ಯಕ್ತಿ ಈಗ ಭಾರತೀಯ ನೌಕಾಪಡೆಯ ಕೆಡೆಟ್ ಆಗಿದ್ದಾರೆ. ಈ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. 

Tamilnadu Youth Goes From FisherMan To Coast Guard Cadet
Author
Bengaluru, First Published Jan 19, 2019, 3:20 PM IST

ಚೆನ್ನೖ :  ಕಳೆದ ಐದು ವರ್ಷದ ಹಿಂದೆ ಸಾಮಾನ್ಯ ಮೀನುಗಾರನಾಗಿದ್ದ ವ್ಯಕ್ತಿ ಈಗ ನೌಕಾಪಡೆಯ ಅಧಿಕಾರಿಯಾಗಿದ್ದಾರೆ. 

ಸಣ್ಣ ದೋಣಿಯನ್ನು ಇಟ್ಟುಕೊಂಡ ತಂಗಚಿಮದಮ್  ರಾಮೇಶ್ವರಂನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಇದೀಗ 18ವರ್ಷದ ಈ ಯುವಕ ಭಾರತೀಯ ನೌಕಪಡೆಯ ಕೆಡೆಟ್ ಆಗಿ ಸೇರಿದ್ದಾರೆ.  ಒಡಿಶಾದಲ್ಲಿ ತರಬೇತಿ ಮುಗಿಸಿ ಭಾರತೀಯ ಸೇನೆ ಸೇರಿದ್ದಾರೆ.

ಈ ಬಗ್ಗೆ ಮಾತನಾಡಿದ ತಂಗಚಿ ಕಳೆದ ಒಂದು ವರ್ಷದ ಹಿಂದೆ ನಾನೋರ್ವ ಸಾಮಾನ್ಯ  ಮೀನುಗಾರ. ತಂದೆಯೊಂದಿಗೆ  ಸಮುದ್ರಕ್ಕೆ ತೆರಳುವುದು ಮೀನು ಹಿಡಿಯುವುದು ಅಷ್ಟೇ ನನ್ನ ಕೆಲಸವಾಗಿತ್ತು. ಆದರೆ ಇಂದು ದೇಶದ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿ ದೇಶದ ಜನರನ್ನು ಕಾಯುವ ಅವಕಾಶ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

 ಕಳೆದ ನಾಲ್ಕು ವರ್ಷಗಳ ಹಿಂದೆ ಈ ಕುಟುಂಬದ ಮೀನುಗಾರಿಕಾ ದೋಣಿಯೊಂದನ್ನು ಶ್ರೀಲಂಕಾ ನೌಕಾಪಡೆ ಅಪಹರಿಸಿತ್ತು. ಇದರಿಂದ ಹೆಚ್ಚಿನ ನಷ್ಟ ಎದುರಾಗಿತ್ತು. ಆದರೆ ತಮ್ಮ ಪುತ್ರನೀಗ ನೌಕಾ ಪಡೆ ಸೇರಿರುವುದು ಈ ನಷ್ಟವನ್ನು ತುಂಬಿದೆ ಎಂದು ತಂಗಚಿಮದಮ್ ತಂದೆ ಹೆಮ್ಮೆಯಿಂದ ಹೇಳಿದ್ದಾರೆ.

Follow Us:
Download App:
  • android
  • ios