ರಾಜೀವ್ ಹಂತಕರಿಗೆ ಬಿಡುಗಡೆ ಯೋಗ, ತಮಿಳುನಾಡು ನಿರ್ಧಾರದ ಹಿಂದೆ ಏನಿದೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 9:20 PM IST
Tamil Nadu Cabinet recommends release of Rajiv Gandhi assassination case convicts
Highlights

ಮಾಜಿ ಪ್ರಧಾನಿ ರಾಹುಲ್ ಗಾಂಧಿ ಅವರ ಹಂತಕರಿಗೆ ಸಂಬಂಧಿಸಿ ತಮಿಳುನಾಡು ಸರಕಾರ ಬಹಳ ಮುಖ್ಯ ನಿರ್ಧಾರ ತೆಗೆದುಕೊಂಡಿದೆ. ಹಂತಕರನ್ನು ಬಿಡುಗಡೆ ಮಾಡಲು ರಾಜ್ಯಪಾಳರಿಗೆ ಶಿಪಾರಸು ಮಾಡಲು ತಮಿಳುನಾಡು ಸರಕಾರ ಮುಂದಾಗಿದೆ.

ಚೆನ್ನೈ[ಸೆ.9]  ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಗೆ ಶಿಫಾರಸು ಮಾಡಲು ತಮಿಳುನಾಡು ಸಚಿವ ಸಂಪುಟ ಭಾನುವಾರ ನಿರ್ಧರಿಸಿದ್ದು ಈ ತೀರ್ಮಾನ ಅನೇಕ ವಿಚಾರಗಳ ಚರ್ಚೆಗೆ ನಾಂದಿ ಹಾಡಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ಮೀನುಗಾರಿಕೆ ಸಚಿವ ಡಿ ಜಯಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಧಾನದ 161ನೇ ವಿಧಿಯನ್ವಯ ಎಲ್ಲಾ ಏಳು ಹಂತಕರನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ 27 ವರ್ಷಗಳಿಂದ ಜೈಲಿನಲ್ಲಿರುವ ರಾಜೀವ್ ಗಾಂಧಿ ಹಂತಕರಾದ ನಳಿನಿ ಶ್ರೀಹರಿಹರನ್‌, ಮುರುಗನ್‌, ಪೆರಾರಿವಾಲನ್‌, ರಾಬರ್ಟ್‌ ಪಯಾಸ್‌, ರವಿಚಂದ್ರನ್‌, ಸಂತಾನ್‌, ಜಯಕುಮಾರ್‌ ಅವರನ್ನು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಲು ಮುಂದಾಗಿದೆ.

loader